ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ರೋಹಿತ್ ಶರ್ಮಾ ವಿದಾಯ

Update: 2024-06-30 04:01 GMT

PC:X

ಹೊಸದಿಲ್ಲಿ: ಎಂ.ಎಸ್.ಧೋನಿ ಬಳಿಕ ಭಾರತಕ್ಕೆ 2ನೇ ಟಿ20 ವಿಶ್ವಕಪ್ ಗೆದ್ದುಕೊಟ್ಟ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅಂತರಾಷ್ಟ್ರೀಯ ಟಿ20 ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಚುಟುಕು ಕ್ರಿಕೆಟ್ಗೆ ಗುಡ್ಬೈ ಹೇಳಿದ ಬೆನ್ನಲ್ಲೇ ಟ್ರೋಫಿ ಗೆದ್ದ ಸಂತಸದ ಮಧ್ಯೆ ಶರ್ಮಾ ಕೂಡಾ ವಿದಾಯ ಹೇಳಿದರು.

ಆದರೆ ಅಂತರರಾಷ್ಟ್ರೀಯ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಮುಂದುವರಿಯುವುದಾಗಿ ಶರ್ಮಾ ಸ್ಪಷ್ಟಪಡಿಸಿದ್ದಾರೆ. ಫೈನಲ್ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದ ಶರ್ಮಾ "ಇದು ನನ್ನ ಕೊನೆಯ ಟಿ20 ಪಂದ್ಯವೂ ಹೌದು" ಎಂದರು.

"ಈ ವಿಧದ ಕ್ರಿಕೆಟ್ಗೆ ಗುಡ್ಬೈ ಹೇಳಲು ಇದಕ್ಕಿಂತ ಉತ್ತಮ ಸಮಯ ಸಿಗಲಾರದು. ಇದರ ಪ್ರತಿ ಕ್ಷಣವನ್ನು ನಾನು ಆನಂದಿಸಿದ್ದೇನೆ. ಚುಟುಕು ಕ್ರಿಕೆಟ್ ಮೂಲಕವೇ ನಾನು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದೆ. ಇದು ನನ್ನ ಬಯಕೆಯಾಗಿತ್ತು. ಕಪ್ ಗೆಲ್ಲುವುದು ನನ್ನ ಅಭಿಲಾಷೆಯಾಗಿತ್ತು. ಗೆಲ್ಲಲೇಬೇಕಿತ್ತು. ಶಬ್ದಗಳಲ್ಲಿ ಇದನ್ನು ಬಣ್ಣಿಸುವುದು ಕಷ್ಟ. ಇದು ನನಗೆ ಭಾವನಾತ್ಮಕ ಕ್ಷಣ. ಜೀವನದಲ್ಲಿ ಈ ಪ್ರಶಸ್ತಿಗಾಗಿ ಹಾತೊರೆಯುತ್ತಲೇ ಇದ್ದೆ. ಕೊನೆಗೂ ಆ ರೇಖೆ ದಾಟಿದ ಬಗ್ಗೆ ಸಂತಸ ಇದೆ" ಎಂದು ಹೇಳಿದರು.

ಚುಟುಕು ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರನಾಗಿ ರೋಹಿತ್ ವಿದಾಯ ಹೇಳಿದ್ದಾರೆ. 159 ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಅವರು 4231 ರನ್ ಗಳಿಸಿದ್ದಾರೆ. ಜತೆಗೆ ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಗರಿಷ್ಠ (5) ಶತಕ ಗಳಿಸಿದ ದಾಖಲೆಯೂ ಇವರ ಹೆಸರಿನಲ್ಲಿದೆ. ಮೊದಲ ಬಾರಿಗೆ ಕಪ್ ಗೆದ್ದ ತಂಡದಲ್ಲೂ ಯುವ ಆಟಗಾರರಾಗಿ ಪ್ರಮುಖ ಪಾತ್ರ ವಹಿಸಿದ್ದ ಅವರು, ಇದೀಗ ಪ್ರಬುದ್ಧ ಆಟಗಾರರಾಗಿ ದೇಶಕ್ಕೆ ವಿಶ್ವಕಪ್ ಗೆದ್ದುಕೊಟ್ಟಿದ್ದಾರೆ.

ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News