ಐಪಿಎಲ್ ನಲ್ಲಿ 17ನೇ ಬಾರಿ ಶೂನ್ಯಕ್ಕೆ ಔಟಾದ ರೋಹಿತ್ ಶರ್ಮಾ
ಮುಂಬೈ : ಮುಂಬೈ ಇಂಡಿಯನ್ಸ್ ಆರಂಭಿಕ ಆಟಗಾರ ರೋಹಿತ್ ಶರ್ಮಾ ಅವರು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಹೆಚ್ಚು ಬಾರಿ ಶೂನ್ಯಕ್ಕೆ ಔಟಾಗಿ ಆರ್‌ಸಿಬಿ ವಿಕೆಟ್ ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್ ಅವರ ಅನಪೇಕ್ಷಿತ ದಾಖಲೆಯನ್ನು ಸರಿಗಟ್ಟಿದ್ದಾರೆ.
ರೋಹಿತ್ ಹಾಗೂ ಕಾರ್ತಿಕ್ ಇಬ್ಬರೂ ಈಗ 17 ಬಾರಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್, ಪಿಯೂಷ್ ಚಾವ್ಲಾ, ಮನ್‌ದೀಪ್ ಸಿಂಗ್ ಹಾಗೂ ಸುನೀಲ್ ನರೇನ್ 15 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ.
ರಾಜಸ್ಥಾನದ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ಎಸೆದ ಇನಿಂಗ್ಸ್‌ನ ಮೊದಲ ಓವರ್‌ನ ಐದನೇ ಎಸೆತದಲ್ಲಿ ಈ ಘಟನೆ ನಡೆದಿದೆ. ರೋಹಿತ್ ಅವರು ಬೌಲ್ಟ್ ಎಸೆತವನ್ನು ಕೆಣಕಲು ಹೋಗಿ ರಾಜಸ್ಥಾನದ ನಾಯಕ ಸಂಜು ಸ್ಯಾಮ್ಸನ್‌ಗೆ ಕ್ಯಾಚ್ ನೀಡಿದರು. ಬೌಲ್ಟ್ ಮುಂದಿನ ಎಸೆತದಲ್ಲಿ ನಮನ್ ಧೀರ್ ವಿಕೆಟನ್ನು ಪಡೆದು ಮುಂಬೈಗೆ ಶಾಕ್ ನೀಡಿದರು.
ಐಪಿಎಲ್‌ನಲ್ಲಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದವರು
17-ರೋಹಿತ್ ಶರ್ಮಾ
17-ದಿನೇಶ್ ಕಾರ್ತಿಕ್
15-ಮ್ಯಾಕ್ಸ್‌ವೆಲ್
15-ಪಿಯೂಷ್ ಚಾವ್ಲಾ
15-ಮನ್‌ದೀಪ್ ಸಿಂಗ್
15- ಸುನೀಲ್ ನರೇನ್