ಪ್ಯಾರಿಸ್‌ ಒಲಿಂಪಿಕ್ಸ್: ಮುಂದಿನ ಹಂತಕ್ಕೆ ಅರ್ಹತೆ ಪಡೆದ ಭಾರತದ ಏಕೈಕ ರೋವರ್‌ ಬಲರಾಜ್‌ ಪನ್ವರ್‌

Update: 2024-07-27 10:27 GMT

 Photo credit: olympics.com

ಪ್ಯಾರಿಸ್: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ಭಾರತದ ಏಕೈಕ ರೋವರ್‌ ಬಲರಾಜ್‌ ಪನ್ವರ್‌ ಅವರು ಮೊದಲನೇ ಹೀಟ್‌ನಲ್ಲಿ ನಾಲ್ಕನೇ ಸ್ಥಾನ ಪಡೆದು ಇಂದು ಪುರುಷರ ಸಿಂಗಲ್ಸ್‌ ಸ್ಕಲ್‌ ಸ್ಪರ್ಧೆಯಲ್ಲಿ ಮುಂದಿನ ಹಂತ ತಲುಪಿದ್ದಾರೆ.

ಇಪ್ಪತ್ತೈದು ವರ್ಷದ ಪನ್ವರ್‌ ಅವರು 7:07.11 ಸಮಯದಲ್ಲಿ ತಮ್ಮ ಗುರಿ ತಲುಪಿದ್ದರು. ನ್ಯೂಝಿಲೆಂಡ್‌ನ ಥಾಮಸ್‌ ಮೆಕಿಂಟೋಶ್‌ 6:55.92 ಸಮಯದಲ್ಲಿ ತಲುಪಿ ಮೊದಲ ಸ್ಥಾನ ಪಡೆದರೆ ನಂತರದ ಎರಡು ಸ್ಥಾನಗಳನ್ನು ಸ್ಟೆಫಾನೋಸ್‌ ನಟೌಸ್ಕೋಸ್‌ (7:01.79) ಮತ್ತು ಅಬ್ದೆಲ್ಖಾಲೆಕ್‌ ಎಲ್ಬನ್ನಾ 97:05.06) ಪಡೆದಿದ್ದಾರೆ.

ಪನ್ವರ್‌ ಅವರಿಗೆ ಸೆಮಿಫೈನಲ್ಸ್‌ ಅಥವಾ ಫೈನಲ್ಸ್‌ಗೆ ಮುಂದುವರಿಯುವ ಎರಡನೇ ಅವಕಾಶವಿರಲಿದೆ.

ಚೀನಾದಲ್ಲಿ 2022ರಲ್ಲಿ ನಡೆದ ಏಷ್ಯನ್‌ ಗೇಮ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ಪನ್ವರ್‌, ಕೊರಿಯಾದಲ್ಲಿ ನಡೆದ ಏಷಿಯನ್‌ ಎಂಡ್‌ ಓಶಿಯಾನಿಕ್‌ ಒಲಿಂಪಿಕ್‌ ಕ್ವಾಲಿಫಿಕೇಶನ್‌ ರೆಗಟ್ಟಾದಲ್ಲಿ ಕಂಚಿನ ಪದಕ ಪಡೆದಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News