ಪ್ಯಾರಿಸ್ ಒಲಿಂಪಿಕ್ಸ್ 100 ಮೀ. ಮಹಿಳೆಯರ ಓಟದ ಸ್ಪರ್ಧೆ | ಐತಿಹಾಸಿಕ ಚಿನ್ನ ಗೆದ್ದ ಸೇಂಟ್ ಲೂಸಿಯಾದ ಜೂಲಿಯನ್ ಆಲ್ಫ್ರೆಡ್

Update: 2024-08-04 13:08 GMT

 ಜೂಲಿಯನ್ ಆಲ್ಫ್ರೆಡ್  

ಪ್ಯಾರಿಸ್ : ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ 100 ಮೀಟರ್ ಮಹಿಳಾ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಳ್ಳುವ ಮೂಲಕ ಸೇಂಟ್ ಲೂಸಿಯಾದ ಜೂಲಿಯನ್ ಆಲ್ಫ್ರೆಡ್ ಐತಿಹಾಸಿಕ ಸಾಧನೆ ಮಾಡಿದ್ದು, ಇದೇ ಪ್ರಥಮ ಬಾರಿಗೆ ಒಲಿಂಪಿಕ್ ಕ್ರೀಡಾಕೂಟದ ಇತಿಹಾಸದಲ್ಲಿ ಸೇಂಟ್ ಲೂಸಿಯಾ ಚಿನ್ನದ ಪದಕಕ್ಕೆ ಭಾಜನವಾಗಿದೆ. ಸ್ಟೇಡ್ ಡಿ ಫ್ರಾನ್ಸ್ ಕ್ರೀಡಾಂಗಣದಲ್ಲಿ ಸುರಿಯುತ್ತಿದ್ದ ಭಾರಿ ಮಳೆ ಹಾಗೂ ಕೊಚ್ಚೆಯಾಗಿದ್ದ ಟ್ರ್ಯಾಕ್ ನಲ್ಲಿ ಓಡಿದ ಜೂಲಿಯನ್ ಆಲ್ಫ್ರೆಡ್, 100 ಮೀಟರ್ ಓಟವನ್ನು 10.72 ಸೆಕೆಂಡ್ ಗಳಲ್ಲಿ ಮುಕ್ತಾಯಗೊಳಿಸುವುದರೊಂದಿಗೆ ಮೊದಲಿಗರಾದರು.

ಓಟದಲ್ಲಿ ತಮಗೆ ನಿಕಟ ಪೈಪೋಟಿ ನೀಡಿದ ಶಾ’ಕ್ಯಾರಿ ರಿಚರ್ಡ್ ಸನ್ ಅವರನ್ನು ಹಿಂದಿಕ್ಕಿದ ಜೂಲಿಯನ್ ಆಲ್ಫ್ರೆಡ್, ಗೆಲುವಿನ ಗೆರೆಯನ್ನು ದಾಟಿದರು. 10.87 ಸೆಕೆಂಡ್ ಗಳಲ್ಲಿ ತಮ್ಮ ಓಟವನ್ನು ಪೂರೈಸಿದ ಶಾ’ಕ್ಯಾರಿ ರಿಚರ್ಡ್ ಸನ್ ಬೆಳ್ಳಿ ಪದಕ ಹಾಗೂ 10.92 ಸೆಕೆಂಡ್ ಗಳಲ್ಲಿ ತಮ್ಮ ಓಟವನ್ನು ಪೂರೈಸಿದ ಅವರ ಸಹ ತರಬೇತುದಾರರಾದ ಮೆಲಿಸ್ಸಾ ಜೆಫ್ಫರ್ ಸನ್ ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಂಡರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News