ಆಸ್ಟ್ರೇಲಿಯದ ವಿರುದ್ಧ ದ್ವಿತೀಯ ಆ್ಯಶಸ್ ಟೆಸ್ಟ್: ಇಂಗ್ಲೆಂಡ್ ತಂಡಕ್ಕೆ ರೆಹಾನ್ ಸೇರ್ಪಡೆ

Update: 2023-06-23 17:35 GMT

Photo: twitter\ @InsideSportIND

ಲಂಡನ್: ಈಗ ನಡೆಯುತ್ತಿರುವ ಆಸ್ಟ್ರೇಲಿಯ ವಿರುದ್ಧದ ಆ್ಯಶಸ್ ಸರಣಿಯ 2ನೇ ಟೆಸ್ಟ್ ಪಂದ್ಯಕ್ಕಾಗಿ ಇಂಗ್ಲೆಂಡ್ ತಂಡವು ಲೆಗ್ ಸ್ಪಿನ್ನರ್ ರೆಹಾನ್ ಅಹ್ಮದ್ ರನ್ನು ಬುಧವಾರ ಸೇರಿಸಿಕೊಂಡಿದೆ.

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ವೇಳೆ ಬೆರಳಿಗೆ ಗಾಯ ಮಾಡಿಕೊಂಡಿದ್ದ ಸ್ಪಿನ್ ಆಲ್ರೌಂಡರ್ ಮೊಯಿನ್ ಅಲಿ ಬದಲಿಗೆ 18 ಸದಸ್ಯರ ತಂಡಕ್ಕೆ ಅಹ್ಮದ್ ಸೇರ್ಪಡೆಯಾಗಿದ್ದಾರೆ. 18ರ ಹರೆಯದ ಅಹ್ಮದ್ ಕಳೆದ ವರ್ಷ ಕರಾಚಿಯಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್ ಗೆ ಕಾಲಿಟ್ಟಿದ್ದರು. ಟೆಸ್ಟ್ ಕ್ರಿಕೆಟ್ ನಲ್ಲಿ ಚೊಚ್ಚಲ ಐದು ವಿಕೆಟ್ ಗೊಂಚಲು ಸೇರಿದಂತೆ 2 ಇನಿಂಗ್ಸ್‌ನಲ್ಲಿ ಒಟ್ಟು 7 ವಿಕೆಟ್ ಗಳನ್ನು ಕಬಳಿಸಿದ್ದರು. ಲೆಗ್-ಸ್ಪಿನ್ನರ್ ಈ ತನಕ ಲೈಸೆಸ್ಟರ್ಶೈರ್ ಪರ 11 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು, 37ರ ಸರಾಸರಿಯಲ್ಲಿ ಒಟ್ಟು 22 ವಿಕೆಟ್ ಗಳನ್ನು ಕಬಳಿಸಿದ್ದಾರೆ. 1 ಶತಕ ಹಾಗೂ 4 ಅರ್ಧಶತಕಗಳ ಸಹಿತ ಒಟ್ಟು 629 ರನ್ ಕಲೆ ಹಾಕಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News