ದಕ್ಷಿಣ ಆಫ್ರಿಕಾದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅತಿ ವೇಗದ ದ್ವಿಶತಕ ಗಳಿಸಿದ ಶೆಫಾಲಿ ವರ್ಮ
ಚೆನ್ನೈ: ಇಲ್ಲಿನ ಚೆಪಾಕ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅತಿ ವೇಗದ ದ್ವಿಶತಕ ಗಳಿಸುವ ಮೂಲಕ ಭಾರತ ತಂಡದ ಮಿಂಚಿನ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮ ನೂತನ ದಾಖಲೆ ನಿರ್ಮಿಸಿದ್ದಾರೆ. 20 ವರ್ಷದ ಶೆಫಾಲಿ ವರ್ಮ ಕೇವಲ 194 ಎಸೆತಗಳನ್ನು ಎದುರಿಸಿ ತಮ್ಮ ದ್ವಿಶತಕ ಪೂರೈಸಿದರು.
ಶೆಫಾಲಿ ವರ್ಮ ಈ ವೇಗದ ದ್ವಿಶತಕ ಸಾಧನೆಯ ಮೂಲಕ, ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾ ತಂಡದ ಆಟಗಾರ್ತಿ ಅನ್ನಾಬೆಲ್ ಸೂದರ್‌ಲ್ಯಾಂಡ್ 248 ಎಸೆತಗಳನ್ನು ಎದುರಿಸಿ ಮಾಡಿದ್ದ ದ್ವಿಶತಕದ ಸಾಧನೆಯನ್ನು ಪುಡಿಗೈದರು.
ಶೆಫಾಲಿ ವರ್ಮ ತಮ್ಮ ಈ ದಾಖಲೆಯ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ದ್ವಿಶತಕದ ಸಾಧನೆಗೈದ ಎರಡನೆ ಭಾರತೀಯ ಆಟಗಾರ್ತಿಯಾದರು. ಇದಕ್ಕೂ ಮುನ್ನ, 22 ವರ್ಷಗಳ ಹಿಂದೆ ಭಾರತ ತಂಡದ ನಾಯಕಿಯಾಗಿದ್ದ ಮಿಥಾಲಿ ರಾಜ್ ದ್ವಿಶತಕ ಸಾಧನೆಗೈದಿದ್ದ ಪ್ರಥಮ ಭಾರತೀಯ ಆಟಗಾರ್ತಿಯಾಗಿದ್ದರು.
2⃣0⃣5⃣ runs
— BCCI Women (@BCCIWomen) June 28, 2024
1⃣9⃣7⃣ deliveries
2⃣3⃣ fours
8⃣ sixes
WHAT. A. KNOCK
Well played @TheShafaliVerma!
Follow the match ▶️ https://t.co/4EU1Kp6YTG#TeamIndia | #INDvSA | @IDFCFIRSTBank pic.twitter.com/UTreiCRie6