ತವರಿನಲ್ಲಿ ವಿದಾಯದ ಟೆಸ್ಟ್: ಶಕೀಬ್ ಅಲ್ ಹಸನ್ ಕನಸು ನನಸಾಗುವ ಸಾಧ್ಯತೆ

Update: 2024-10-08 03:42 GMT

x.com/saifahmed75

ಢಾಕಾ: ಭದ್ರತಾ ಆತಂಕಗಳ ನಡುವೆಯೂ, ತವರಿನಲ್ಲೇ ವಿದಾಯದ ಟೆಸ್ಟ್ ಆಡಬೇಕು ಎಂಬ ಬಾಂಗ್ಲಾದೇಶ ಕ್ರಿಕೆಟ್ ತಾರೆ ಶಕೀಬ್ ಅಲ್ ಹಸನ್ ಅವರ ಕನಸು ನನಸಾಗುವ ನಿರೀಕ್ಷೆ ಇದೆ. ವಿದಾಯದ ಟೆಸ್ಟನ್ನು ತವರಲ್ಲಿ ಆಡುವ ಅಪೇಕ್ಷೆಯನ್ನು ಹಸನ್ ವ್ಯಕ್ತಪಡಿಸಿದ್ದು, ಇದಕ್ಕೆ ಅಧಿಕಾರಿಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಕ್ರಿಕ್ ಬಝ್ ವರದಿಯ ಪ್ರಕಾರ, ಶಕೀಬ್ ಅವರು ತವರಿನಲ್ಲೇ ಟೆಸ್ಟ್ ವೃತ್ತಿಯನ್ನು ಕೊನೆಗೊಳಿಸಬೇಕು ಎನ್ನುವುದು ತಮ್ಮ ಅಪೇಕ್ಷೆ ಎಂದು ಯುವ ಮತ್ತು ಕ್ರೀಡಾ ಸಲಹೆಗಾರ ಆಸೀಫ್ ಮಹ್ಮೂದ್ ಶೋಜಿಬ್ ಭುಯಾನ್ ಹೇಳಿದ್ದಾರೆ.

"ಶಕೀಬ್ ದೇಶದ ಕ್ರಿಕೆಟ್ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ. ತಮ್ಮ ಅಂತಿಮ ಟೆಸ್ಟ್ ಪಂದ್ಯವನ್ನು ಬಾಂಗ್ಲಾದೇಶದಲ್ಲಿ ಆಡಲು ಅವರು ಬಯಸಿರುವುದರಿಂದ, ಅದಕ್ಕೆ ಅವಕಾಶ ಸಿಗಲಿದೆ ಎನ್ನುವುದು ನನ್ನ ವೈಯಕ್ತಿಕ ನಿರೀಕ್ಷೆ" ಎಂದು ಬಾಂಗ್ಲಾದೇಶ ಮತ್ತು ಸ್ಕಾಟ್ಲೆಂಡ್ ನಡುವಿನ ಮಹಿಳಾ ಟಿ20 ವಿಶ್ವಕಪ್ ಪಂದ್ಯದ ವೇಳೆ ಅಭಿಪ್ರಾಯಪಟ್ಟಿದ್ದಾರೆ.

ಶಕೀಬ್ ಗೆ ಅತ್ಯುನ್ನತ ಮಟ್ಟದ ಭದ್ರತೆಯನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಒದಗಿಸಲಿದೆ ಎಂಬ ಭರವಸೆಯನ್ನು ಅವರು ನೀಡಿದರು. ಆದರೆ ಈ ಆಲ್ ರೌಂಡರ್ ವಿರುದ್ಧದ ಆರೋಪಗಳನ್ನು ಕಾನೂನು ಸಚಿವಾಲಯ ತನಿಖೆ ನಡೆಸಲಿದೆ ಎಂದು ಸ್ಪಷ್ಟಪಡಿಸಿದರು.

"ನಮ್ಮ ಆಟಗಾರರಿಗೆ ಗರಿಷ್ಠ ಪ್ರಮಾಣದ ಭದ್ರತೆಯನ್ನು ಒದಗಿಸಲಿದ್ದೇವೆ. ಶಕೀಬ್ ಅಲ್ ಹಸನ್ ಅವರ ಭದ್ರತೆಗೆ ನಾವು ಬದ್ಧರಾಗಿದ್ದೇವೆ ಹಾಗೂ ಆ ಬದ್ಧತೆಯನ್ನು ನಾವು ಗೌರವಿಸುತ್ತೇವೆ" ಎಂದರು.

Full View

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News