ಲೆಜೆಂಡ್ಸ್ ಲೀಗ್ ಕ್ರಿಕೆಟ್ ಗೆ ಸೇರ್ಪಡೆಯಾದ ಶಿಖರ್ ಧವನ್

Update: 2024-08-26 15:39 GMT

 ಶಿಖರ್ ಧವನ್ | PC : X  

ಹೊಸದಿಲ್ಲಿ: ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದ ನಂತರ ಭಾರತದ ಮಾಜಿ ಆರಂಭಿಕ ಆಟಗಾರ ಶಿಖರ್ ಧವನ್ ಸೋಮವಾರ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಗೆ(ಎಲ್ಎಲ್ಸಿ)ಸೇರ್ಪಡೆಯಾದರು.

38ರ ಹರೆಯದ ಧವನ್ ಶನಿವಾರ ದೇಶೀಯ ಹಾಗೂ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದ ಹಿನ್ನೆಲೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಿಂದ ಹೊರಗೆ ಟಿ20 ಸ್ಪರ್ಧಾವಳಿಗಳನ್ನು ಆಡಲು ಅರ್ಹರಾಗಿದ್ದಾರೆ.

ಕ್ರಿಕೆಟ್ ಪಂದ್ಯಕ್ಕೆ ಅಗತ್ಯವಿರುವಷ್ಟು ನಾನು ಫಿಟ್ ಇದ್ದೇನೆ. ಕ್ರಿಕೆಟ್ ನನ್ನ ಅವಿಭಾಜ್ಯ ಅಂಗ. ಅದು ನನ್ನನ್ನು ಬಿಟ್ಟು ಹೋಗದು. ನನ್ನ ಕ್ರಿಕೆಟ್ ಸ್ನೇಹಿತರೊಂದಿಗೆ ಮತ್ತೆ ಸೇರಲು ಇಷ್ಟಪಡುವೆ. ನನ್ನ ಅಭಿಮಾನಿಗಳನ್ನು ರಂಜಿಸುವುದನ್ನು ಮುಂದುವರಿಸುವೆ. ನಾವೆಲ್ಲರೂ ಒಟ್ಟಿಗೆ ಹೊಸ ನೆನಪುಗಳನ್ನು ಸೃಷ್ಟಿಸುವೆವು ಎಂದು ಧವನ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದರು.

ಭಾರತದ ಪರ 34 ಟೆಸ್ಟ್, 167 ಏಕದಿನ ಹಾಗೂ 68 ಟಿ20 ಪಂದ್ಯಗಳನ್ನು ಆಡಿರುವ ಧವನ್ ಒಟ್ಟು 12,286 ರನ್ ಗಳಿಸಿದ್ದರು.

ಲೆಜೆಂಡ್ಸ್ ಲೀಗ್ ಕ್ರಿಕೆಟ್ ಸೆಪ್ಟಂಬರ್ ನಲ್ಲಿ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News