ಅಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೂ ಶುಭಮನ್ ಗಿಲ್ ಅಲಭ್ಯ

Update: 2023-10-09 18:14 GMT

ಶುಭಮನ್ ಗಿಲ್ | Photo: X

ಹೊಸದಿಲ್ಲಿ : ಡೆಂಗಿ ಜ್ವರದಿಂದಾಗಿ ರವಿವಾರ ಚೆನ್ನೈನಲ್ಲಿ ನಡೆದಿದ್ದ ಆಸ್ಟ್ರೇಲಿಯ ವಿರುದ್ಧ ಭಾರತ ಅಡಿರುವ ಮೊದಲ ವಿಶ್ವಕಪ್ ಪಂದ್ಯದಿಂದ ಈಗಾಗಲೇ ಹೊರಗುಳಿದಿದ್ದ ಭಾರತದ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಅಫ್ಘಾನಿಸ್ತಾನ ವಿರುದ್ಧದ ತಂಡ ಆಡಲಿರುವ ಮುಂದಿನ ಪಂದ್ಯದಲ್ಲಿ ಅಲಭ್ಯರಾಗಿದ್ದಾರೆ ಎಂದು ಬಿಸಿಸಿಐ ದೃಢಪಡಿಸಿದೆ.

ಟೀಮ್ ಇಂಡಿಯಾದ ಬ್ಯಾಟರ್ ಶುಭಮನ್ ಗಿಲ್ ಅಕ್ಟೋಬರ್ 9 ರಂದು ತಂಡದೊಂದಿಗೆ ದಿಲ್ಲಿಗೆ ಪ್ರಯಾಣಿಸುತ್ತಿಲ್ಲ. ಚೆನ್ನೈನಲ್ಲಿ ಆಸ್ಟ್ರೇಲಿಯ ವಿರುದ್ಧ ನಡೆದ ಐಸಿಸಿ ಪುರಷರ ವಿಶ್ವಕಪ್-2023ರಲ್ಲಿ ಭಾರತ ಆಡಿರುವ ಮೊದಲ ಪಂದ್ಯದಲ್ಲಿ ಗಿಲ್ ಆಡಿರಲಿಲ್ಲ. ಅಫ್ಘಾನಿಸ್ತಾನ ವಿರುದ್ಧ ಅಕ್ಟೋಬರ್ 11ರಂದು ಹೊಸದಿಲ್ಲಿಯಲ್ಲಿ ನಡೆಯಲಿರುವ ಪಂದ್ಯದಿಂದಲೂ ಗಿಲ್ ಹೊರಗುಳಿಯಲಿದ್ದಾರೆ. ಚೆನ್ನೈನಲ್ಲಿ ಉಳಿಯಲಿರುವ ಗಿಲ್ ವೈದ್ಯಕೀಯ ತಂಡದ ನಿಗಾದಲ್ಲಿದ್ದಾರೆ ಎಂದು ಬಿಸಿಸಿಐ ಪ್ರಕಟನೆಯೊಂದರಲ್ಲಿ ತಿಳಿಸಿದೆ.

ಆಸ್ಟ್ರೇಲಿಯದ ವಿರುದ್ಧ ಭಾರತವು 6 ವಿಕೆಟ್ನಿಂದ ಗೆದ್ದಿರುವ ಪಂದ್ಯದಲ್ಲಿ ಬಲಗೈ ಬ್ಯಾಟರ್ ಗಿಲ್ ಬದಲಿಗೆ ಇಶಾನ್ ಕಿಶನ್ ಆಡಿದ್ದರು. ಆದರೆ ಕಿಶನ್ , ರೋಹಿತ್ ಶರ್ಮಾ ಹಾಗೂ ಶ್ರೇಯಸ್ ಅಯ್ಯರ್ ಶೂನ್ಯಕ್ಕೆ ಔಟಾಗಿದ್ದರು.

24 ರ ಹರೆಯದ ಗಿಲ್ ಕಳೆದೊಂದು ವರ್ಷದಲ್ಲಿ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ ಐದು ಶತಕಗಳನ್ನು ಸಿಡಿಸಿದ್ದರು. ಗಿಲ್ ಅವರ ಸ್ಥಿರ ಪ್ರದರ್ಶನವು ಭಾರತವು 12 ವರ್ಷಗಳ ನಂತರ ವಿಶ್ವಕಪ್ ಟ್ರೋಫಿಯನ್ನು ಮೂರನೇ ಬಾರಿ ಗೆಲ್ಲಲು ನಿರ್ಣಾಯಕ ಪಾತ್ರವಹಿಸುವ ನಿರೀಕ್ಷೆ ಇದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News