ಡಬ್ಲ್ಯುಪಿಎಲ್ ಹರಾಜು: ಆಲ್ ರೌಂಡರ್ ಸಿಮ್ರಾನ್ ಶೇಕ್ ದುಬಾರಿ ಆಟಗಾರ್ತಿ
Update: 2024-12-15 15:37 GMT
ಬೆಂಗಳೂರು: 2025ರ ಮಹಿಳೆಯರ ಪ್ರೀಮಿಯರ್ ಲೀಗ್(ಡಬ್ಲ್ಯುಪಿಎಲ್)ಗಿಂತ ಮೊದಲು ರವಿವಾರ ಬೆಂಗಳೂರಿನಲ್ಲಿ ನಡೆದ ಮಿನಿ ಹರಾಜು ಪ್ರಕ್ರಿಯೆಯಲ್ಲಿ 19 ಆಟಗಾರ್ತಿಯರನ್ನು ವಿವಿಧ ತಂಡಗಳು ತಮ್ಮ ತೆಕ್ಕೆಗೆ ಸೇರಿಸಿಕೊಂಡಿವೆ.
ಮುಂಬೈನ ಆಲ್ ರೌಂಡರ್ ಸಿಮ್ರಾನ್ ಶೇಕ್ 1.90 ಕೋಟಿ ರೂ.ಗೆ ಗುಜರಾತ್ ಜೈಂಟ್ಸ್ಸ್ ಪಾಲಾದರು. ವೆಸ್ಟ್ಇಂಡೀಸ್ ನ ಡಿಯಾಂಡ್ರಾ ಡೊಟಿನ್ ಅವರು ಗುಜರಾತ್ ಜೈಂಟ್ಸ್ ತಂಡಕ್ಕೆ 1.70 ಕೋಟಿ ರೂ.ಗೆ ಹರಾಜಾದರು. ವಿಕೆಟ್ ಕೀಪರ್ ಜಿ.ಕಮಲಿನಿ 1.60 ಕೋಟಿ ರೂ.ಗೆ ಮುಂಬೈ ಇಂಡಿಯನ್ಸ್ಗೆ ಸೇರಿದರು.
ಪ್ರೇಮಾ ರಾವತ್ ಆರ್ಸಿಬಿಗೆ 1.20 ಕೋಟಿ ರೂ. ಹಾಗೂ ಎನ್, ಚರಣಿ ಅವರು ಡೆಲ್ಲಿ ಕ್ಯಾಪಿಟಲ್ಸ್ಗೆ 55 ಲಕ್ಷ ರೂ.ಗೆ ಹರಾಜಾದರು.
ಸಿಮ್ರಾನ್, ಡೊಟಿನ್, ಕಮಲಿನಿ, ಪ್ರೇಮಾ ಹಾಗೂ ಚರಣಿ ಹರಾಜಿನಲ್ಲಿ ಗರಿಷ್ಠ ಮೊತ್ತಕ್ಕೆ ಹರಾಜಾದ ಟಾಪ್-5 ಆಟಗಾರ್ತಿಯರಾಗಿದ್ದಾರೆ.
ಸ್ನೇಹ್ ರಾಣಾ, ಹೀದರ್ ನೈಟ್, ಲೌರೆನ್ ಬೆಲ್, ಲೌರಾ ಹ್ಯಾರಿಸ್ ಹರಾಜಾಗದೆ ಉಳಿದ ಪ್ರಮುಖ ಆಟಗಾರ್ತಿಯರು.