ಬಿಸಿಸಿಐಯಿಂದ ಹಾರ್ದಿಕ್ ಪಾಂಡ್ಯಗೆ ವಿಶೇಷ ಮಣೆ

Update: 2024-05-02 16:08 GMT

ಹಾರ್ದಿಕ್ ಪಾಂಡ್ಯ | PC : PTI 

ಮುಂಬೈ : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಕಳಪೆ ನಿರ್ವಹಣೆ ನೀಡಿರುವ ಹೊರತಾಗಿಯೂ, ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ ಟಿ20 ವಿಶ್ವಕಪ್ ತಂಡದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಆಯ್ಕೆ ಸಮಿತಿಯು ಸ್ಥಾನ ನೀಡಿರುವುದಕ್ಕೆ ಟೀಕೆಗಳು ವ್ಯಕ್ತವಾಗಿವೆ.

ಟಿ20 ವಿಶ್ವಕಪ್ಗೆ ಪ್ರಕಟಿಸಲಾಗಿರುವ 15 ಆಟಗಾರರ ತಂಡದಲ್ಲಿ ಪಾಂಡ್ಯ ಸ್ಥಾನ ಪಡೆದಿದ್ದಾರೆ. ಅದೂ ಅಲ್ಲದೆ, ಅವರನ್ನು ತಂಡದ ಉಪನಾಯಕನಾಗಿಯೂ ನೇಮಿಸಲಾಗಿದೆ.

ಇದಕ್ಕೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುಂಬೈ ಇಂಡಿಯನ್ಸ್ ನಾಯಕನಿಗೆ ಬಿಸಿಸಿಐ ನೀಡಿರುವ ವಿನಾಯಿತಿಗಳನ್ನು ಅವರು ಪ್ರಶ್ನಿಸಿದ್ದಾರೆ.

ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ರ ಉದಾಹರಣೆಯನ್ನೂ ಅವರು ನೀಡಿದ್ದಾರೆ. ದೇಶಿ ಕ್ರಿಕೆಟ್ನಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವವರೆಗೆ ಅವರಿಬ್ಬರನ್ನು ಭಾರತೀಯ ತಂಡದಿಂದ ಹೊರದಬ್ಬಲಾಗಿತ್ತು. ಆದರೆ, ಭಾರತೀಯ ತಂಡಕ್ಕೆ ಮರಳುವ ಮೊದಲು ದೇಶಿ ಕ್ರಿಕೆಟ್ನಿಂದ ದೂರವಿದ್ದ ಹಾರ್ದಿಕ್ಗೆ ಈ ಯಾವುದೇ ನಿಯಮಗಳನ್ನು ಅನ್ವಯಿಸಲಾಗಿಲ್ಲ.

“ಭಾರತೀಯ ಕ್ರಿಕೆಟ್ಗೆ ವರ್ಷವಿಡೀ ಸೇವೆ ಸಲ್ಲಿಸಲು ನಿಯಮಿತವಾಗಿ ದೇಶಿ ಕ್ರಿಕೆಟ್ನಲ್ಲಿ ಆಡುವುದು ಅಗತ್ಯವಾಗಿದೆ. ಗಾಯದ ಸಮಸ್ಯೆ ಸಾಮಾನ್ಯ. ಆದರೆ, ರಾಷ್ಟ್ರೀಯ ತಂಡಕ್ಕೆ ಮರಳಲು ದೇಶಿ ಕ್ರಿಕೆಟ್ ಸೇರಿದಂತೆ ನಿಯಮಿತವಾಗಿ ಪಂದ್ಯಗಳಲ್ಲಿ ಆಡುವುದು ಅಗತ್ಯವಾಗಿದೆ. ಆದರೆ, ಹಾರ್ದಿಕ್ ಪಾಂಡ್ಯ ಪ್ರಕರಣದಲ್ಲಿ, ಈ ಯಾವುದೇ ಅಗತ್ಯಗಳನ್ನು ಪೂರೈಸದೆ ಅವರು ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ'' ಎಂದು 'ಸ್ಟಾರ್ ಸ್ಪೋಟ್ರ್ಸ್'ನೊಂದಿಗೆ ಮಾತನಾಡಿದ ಪಠಾಣ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News