ಭ್ರಷ್ಟಾಚಾರ ನಿಗ್ರಹ ಘಟಕದ ಹೊಸ ಸ್ವತಂತ್ರ ಅಧ್ಯಕ್ಷರಾಗಿ ಸುಮತಿ ಧರ್ಮವರ್ದನ ನೇಮಕ
ದುಬೈ: ಭ್ರಷ್ಟಾಚಾರ ನಿಗ್ರಹ ಘಟಕದ (ಎಸಿಯು) ನೂತನ ಸ್ವತಂತ್ರ ಅಧ್ಯಕ್ಷರನ್ನಾಗಿ ಸುಮತಿ ಧರ್ಮವರ್ದನರನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಬುಧವಾರ ನೇಮಕ ಮಾಡಿದೆ.
14 ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಸರ್ ರೋನಿ ಫ್ಲಾನಗನ್ ಅವರಿಂದ ತೆರವಾದ ಸ್ಥಾನವನ್ನು ಧರ್ಮವರ್ದನ ತುಂಬಲಿದ್ದಾರೆ.
ಐಸಿಸಿ ಭ್ರಷ್ಟಾಚಾರ ನಿಗ್ರಹ ಘಟಕದ(ಎಸಿಯು)ಹೊಸ ಸ್ವತಂತ್ರ ಅಧ್ಯಕ್ಷರಾಗಿ ಸುಮತಿ ಧರ್ಮವರ್ದನ ಪಿ.ಸಿ. ಅವರನ್ನು ನೇಮಕ ಮಾಡಿರುವುದಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ಇಂದು ಪ್ರಕಟಿಸಿದೆ ಎಂದು ಐಸಿಸಿ ಪ್ರಕಟನೆಯೊಂದರಲ್ಲಿ ತಿಳಿಸಿದೆ.
ಧರ್ಮವರ್ಧನ ಅವರು ಶ್ರೀಲಂಕಾದ ಅಟಾರ್ನಿ ಜನರಲ್ ಇಲಾಖೆಯಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಸೇವೆ ಸಲ್ಲಿಸಿದ್ದಾರೆ. ಹಲವಾರು ಕಾನೂನು ಸಮಸ್ಯೆಗಳಲ್ಲಿ ಸರಕಾರ ಹಾಗೂ ಅದರ ಕ್ರೀಡಾ ಸಚಿವಾಲಯವನ್ನು ಪ್ರತಿನಿಧಿಸಿದ್ದಾರೆ.
ಧರ್ಮವರ್ದನ ಅವರು ಇಂಟರ್‌ಪೋಲ್ ಹಾಗೂ ಡ್ರಗ್ಸ್ ಹಾಗೂ ಕ್ರೈಮ್‌ನ ಯುನೈಟೆಡ್ ನೇಶನ್ಸ್ ಕಚೇರಿಯೊಂದಿಗೆ ಕ್ರೀಡಾ ಭ್ರಷ್ಟಾಚಾರದ ವಿಷಯಗಳ ತನಿಖೆ ಹಾಗೂ ಕ್ರೀಡಾ ಕಾಯ್ದೆಗಳಿಗೆ ಸಂಬಂಧಿಸಿದ ಅಪರಾಧಗಳ ತಡೆಗಟ್ಟುವಿಕೆ ಅಡಿಯಲ್ಲಿ ಕಾನೂನು ಕ್ರಮಗಳನ್ನು ನೋಡಿಕೊಳ್ಳಲಿದ್ದಾರೆ.
ಐಸಿಸಿ ಭ್ರಷ್ಟಾಚಾರ ವಿರೋಧಿ ಘಟಕದ ಸ್ವತಂತ್ರ ಅಧ್ಯಕ್ಷರು ಎಸಿಯು ಅವನ್ನು ಮೇಲ್ವಿಚಾರಣೆ ಮಾಡಲು ಜವಾಬ್ದಾರಿ ಹೊಂದಿದ್ದು, ಧರ್ಮವರ್ದನ ಅವರು ನವೆಂಬರ್ 1ರಂದು ತಮ್ಮ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ ಎಂದು ಐಸಿಸಿ ತಿಳಿಸಿದೆ.