ಚೆನ್ನೈ ಓಪನ್ ಪ್ರಶಸ್ತಿ ಗೆದ್ದ ಸುಮಿತ್ ನಾಗಲ್

Update: 2024-02-11 17:11 GMT

 ಸುಮಿತ್ ನಾಗಲ್ | Photo: X

ಚೆನ್ನೈ: ಭಾರತದ ಸುಮಿತ್ ನಾಗಲ್ ರವಿವಾರ ಚೆನ್ನೈ ಓಪನ್ ಪ್ರಶಸ್ತಿ ಜಯಿಸಿದ್ದಾರೆ. ಫೈನಲ್ ನಲ್ಲಿ ಅವರು ಇಟಲಿಯ ಲೂಕ ನರ್ಡಿಯನ್ನು 6-1, 6-4 ಸೆಟ್‌ ಗಳಿಂದ ಸೋಲಿಸಿದ ಅವರು ಚಾಲೆಂಜರ್ ಟೂರ್ನಲ್ಲಿ ತನ್ನ ಐದನೇ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಪಂದ್ಯವು ಕೇವಲ ಒಂದು ಗಂಟೆ ಎರಡು ನಿಮಿಷಗಳಲ್ಲಿ ಮುಕ್ತಾಯಗೊಂಡಿತು. ಚೆನ್ನೈ ಓಪನ್ನಲ್ಲಿ ಅತ್ಯುತ್ತಮ ನಿರ್ವಹಣೆ ನೀಡಿರುವ ನಾಗಲ್, ಪಂದ್ಯಾವಳಿಯುದ್ದಕ್ಕೂ ಒಂದೇ ಒಂದು ಸೆಟ್ಟನ್ನು ಕಳೆದುಕೊಳ್ಳದೆ ಪ್ರಶಸ್ತಿ ಗೆದ್ದಿದ್ದಾರೆ.

ಈ ವಿಜಯದೊಂದಿಗೆ ಅವರು ಎಟಿಪಿ ಅಗ್ರ 100ರ ಪಟ್ಟಿಗೆ ತನ್ನ ಕ್ರೀಡಾ ಜೀವನದಲ್ಲಿ ಮೊದಲ ಬಾರಿಗೆ ಪ್ರವೇಶ ಪಡೆದಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News