ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಲು ಸೂರ್ಯಕುಮಾರ್‌ಗೆ ಬೇಕು 39 ರನ್!

Update: 2024-10-08 15:07 GMT

ಸೂರ್ಯಕುಮಾರ್ ಯಾದವ್,  ವಿರಾಟ್ ಕೊಹ್ಲಿ | PC : PTI 

ಹೊಸದಿಲ್ಲಿ : ಟೀಮ್ ಇಂಡಿಯಾದ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸುವ ಅಂಚಿನಲ್ಲಿದ್ದಾರೆ.

ಟಿ20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ವೇಗವಾಗಿ 2,500 ರನ್ ಗಳಿಸಿದ ಎರಡನೇ ಬ್ಯಾಟರ್ ಎನಿಸಿಕೊಂಡು ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಸರಿಗಟ್ಟಲು ಯಾದವ್‌ಗೆ ಕೇವಲ 39 ರನ್ ಅಗತ್ಯವಿದೆ.

ಟಿ20 ವಿಶ್ವಕಪ್ ಅಭಿಯಾನದಲ್ಲಿ ಭಾರತಕ್ಕೆ ಪ್ರಶಸ್ತಿ ಗೆದ್ದುಕೊಟ್ಟ ನಂತರ ಕೊಹ್ಲಿ ಅವರು 2024ರ ಜೂನ್‌ನಲ್ಲಿ ಟಿ20 ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು. ಕೊಹ್ಲಿ 73 ಪಂದ್ಯಗಳಲ್ಲಿ 2,500 ರನ್ ಗಳಿಸಿದ್ದರು.

ಸೂರ್ಯಕುಮಾರ್ ಈ ತನಕ 72 ಟಿ20 ಪಂದ್ಯಗಳಲ್ಲಿ 2,461 ರನ್ ಗಳಿಸಿದ್ದಾರೆ. ಒಂದು ವೇಳೆ ಬಾಂಗ್ಲಾದೇಶ ವಿರುದ್ಧ ಎರಡನೇ ಟಿ20 ಪಂದ್ಯದಲ್ಲಿ 39 ರನ್ ಗಳಿಸಿದರೆ, ಕೊಹ್ಲಿ ಅವರ ದಾಖಲೆಯನ್ನು ಸರಿಗಟ್ಟಬಹುದು.

ಸೂರ್ಯಕುಮಾರ್ ಬಾಂಗ್ಲಾದೇಶ ವಿರುದ್ಧದ ಮೊದಲ ಟಿ20 ಪಂದ್ಯಗಳಲ್ಲಿ 207.14ರ ಸ್ಟ್ರೈಕ್‌ರೇಟ್‌ನಲ್ಲಿ ಕೇವಲ 14 ಎಸೆತಗಳಲ್ಲಿ 29 ರನ್ ಗಳಿಸಿದ್ದಾರೆ.

ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಆಝಮ್ ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ 2,500 ರನ್ ಗಳಿಸಿದ ಸಾಧನೆ ಮಾಡಿದ್ದಾರೆ. ಆಝಮ್ ಅವರು ಕೇವಲ 67 ಪಂದ್ಯಗಳಲ್ಲಿ ಈ ಮೈಲಿಗಲ್ಲು ತಲುಪಿದ್ದರು. ಈಗಾಗಲೇ ಟಿ20 ವೃತ್ತಿಬದುಕಿನಲ್ಲಿ ಗಮನ ಸೆಳೆದಿರುವ ಸೂರ್ಯಕುಮಾರ್ ಮತ್ತೊಂದು ಮಹತ್ವದ ಮೈಲಿಗಲ್ಲು ತಲುಪುವ ಹಾದಿಯಲ್ಲಿದ್ದಾರೆ.

► ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ 2,500 ರನ್ ಗಳಿಸಿದ ಆಟಗಾರರು

ಬಾಬರ್ ಆಝಮ್(ಪಾಕಿಸ್ತಾನ)-67 ಪಂದ್ಯಗಳು

ವಿರಾಟ್ ಕೊಹ್ಲಿ (ಭಾರತ)-73 ಪಂದ್ಯಗಳು

ಮುಹಮ್ಮದ್ ರಿಝ್ವಾನ್(ಪಾಕಿಸ್ತಾನ)-76 ಪಂದ್ಯಗಳು

ಆ್ಯರೊನ್ ಫಿಂಚ್(ಆಸ್ಟ್ರೇಲಿಯ)-78 ಪಂದ್ಯಗಳು

ಮಾರ್ಟಿನ್ ಗಪ್ಟಿಲ್(ನ್ಯೂಝಿಲ್ಯಾಂಡ್)-86 ಪಂದ್ಯಗಳು

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News