ಟಿ-20 ಕ್ರಿಕೆಟ್: ವೇಗವಾಗಿ 50 ವಿಕೆಟ್ ಪೂರೈಸಿದ ಭಾರತದ ಬೌಲರ್ ಎನಿಸಿಕೊಂಡ ಕುಲದೀಪ್
Update: 2023-08-08 17:34 GMT
ಗಯಾನ, ಆ.8: ಲೆಗ್ ಸ್ಪಿನ್ನರ್ ಕುಲದೀಪ್ ಯಾದವ್ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ವೇಗವಾಗಿ 50 ವಿಕೆಟ್‌ಗಳನ್ನು ಪೂರೈಸಿದ ಭಾರತದ ಬೌಲರ್ ಎನಿಸಿಕೊಳ್ಳುವ ಮೂಲಕ ಇತಿಹಾಸದ ಪುಸ್ತಕದಲ್ಲಿ ತನ್ನ ಹೆಸರು ಬರೆದರು.
30ನೇ ಟಿ-20 ಪಂದ್ಯವನ್ನಾಡಿದ ಕುಲ್‌ದೀಪ್ ವಿಂಡೀಸ್ ವಿರುದ್ಧ ಮಂಗಳವಾರ ನಡೆದ 3ನೇ ಟಿ-20 ಪಂದ್ಯದಲ್ಲಿ ಈ ಸಾಧನೆ ಮಾಡಿದರು. ಕುಲದೀಪ್ 4 ಓವರ್‌ಗಳಲ್ಲಿ 28 ರನ್ ನೀಡಿ 3 ವಿಕೆಟ್ ಪಡೆದರು. ಈ ಹಿಂದೆ ಯಜುವೇಂದ್ರ ಚಹಾಲ್ 34 ಪಂದ್ಯಗಳಲ್ಲಿ ವೇಗವಾಗಿ 50 ವಿಕೆಟ್ ಪೂರೈಸಿದ ದಾಖಲೆ ನಿರ್ಮಿಸಿದ್ದರು.
ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ (41 ಪಂದ್ಯಗಳು) ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ.
ಶ್ರೀಲಂಕಾದ ಅಜಂತ ಮೆಂಡಿಸ್(26 ಪಂದ್ಯಗಳು) ಹಾಗೂ ಐರ್‌ಲ್ಯಾಂಡ್‌ನ ಮಾರ್ಕ್ ಅಡೈರ್ (28 ಪಂದ್ಯಗಳು)ನಂತರ ಈ ಮೈಲಿಗಲ್ಲು ತಲುಪಿದ ವಿಶ್ವದ ಮೂರನೇ ಆಟಗಾರ ಕುಲದೀಪ್ ಯಾದವ್.