17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆ ಮುತ್ತಿಟ್ಟ ಭಾರತ
ಬ್ರಿಡ್ಜ್ ಟೌನ್ : ಇಲ್ಲಿನ ಕೆನ್ಸಿಂಗ್ಟನ್ ಓವಲ್ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ಸೋಲಿಸಿ 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆ ಮುತ್ತಿಟ್ಟಿದೆ. ಆ ಮೂಲಕ ದಕ್ಷಿಣ ಆಫ್ರಿಕಾ ಗೆ ಮತ್ತೆ ಚೋಕರ್ಸ್ ಪಟ್ಟ ಖಾಯಂ ಆಗಿದೆ.
2007ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಚೊಚ್ಚಲ ವಿಶ್ವಕಪ್ ಗೆದ್ದಿದ್ದ ಭಾರತ, ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಸೋಲಿಸಿ ಚಾಂಪಿಯನ್ ಪಟ್ಟ ಪಡೆಯಿತು. 2007ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಆಡಿದ್ದ ರೋಹಿತ್ ಶರ್ಮಾ, ತಮ್ಮ ನಾಯಕತ್ವದಲ್ಲಿ ಭಾರತಕ್ಕೆ ಮತ್ತೆ ವಿಶ್ವಕಪ್ ತಂದರು.
20ನೇ ಓವರ್ ಆರಂಭದಲ್ಲಿ ಸೂರ್ಯ ಕುಮಾರ್ ಯಾದವ್ ಪಡೆದ ಡೇವಿಡ್ ಮಿಲ್ಲರ್ ಅವರ ಬೌಂಡರಿ ಲೈನ್ ಕ್ಯಾಚ್, 2007 ರ ವಿಶ್ವಕಪ್ ನಲ್ಲಿ ಪಾಕಿಸ್ತಾನದ ಮಿಸ್ಬಾ ಉಲ್ ಹಕ್ ಕ್ಯಾಚ್ ಪಡೆದ ಶ್ರೀಶಾಂತ್ ಅವರನ್ನು ನೆನಪಿಸಿತು.
ಎರಡನೇ ವಿಕೆಟ್ ಪಡೆದ ಜಸ್ಪ್ರೀತ್ ಬೂಮ್ರಾ
ಮಾರ್ಕೊ ಜಾನ್ಸೇನ್ ವಿಕೆಟ್ ಪತನ
18 ನೇ ಓವರ್ ಎಸೆಯಲು ಬಂದ ಜಸ್ಪ್ರೀತ್ ಬೂಮ್ರಾ
18 ಎಸೆತಗಳಲ್ಲಿ ದಕ್ಷಿಣಾ ಆಫ್ರಿಕಾ ಗೆಲ್ಲಲು 22 ರನ್ ಬೇಕಿದೆ
17 ನೇ ಓವರ್ ಮುಕ್ತಾಯ. ದಕ್ಷಿಣ ಆಫ್ರಿಕಾ 155/5
ಕ್ರೀಸ್ ಗೆ ಬಂದ ಮಾರ್ಕೊ ಜಾನ್ಸೇನ್
ಹಾರ್ದಿಕ್ ಪಾಂಡ್ಯ ಬೌಲಿಂಗ್ ನಲ್ಲಿ ಹೆನ್ರಿಚ್ ಕ್ಲಾಸೆನ್ ವಿಕೆಟ್ ಪತನ
ಅರ್ಧ ಶತಕ ಗಳಿಸಿದ ಹೆನ್ರಿಚ್ ಕ್ಲಾಸೆನ್. 23 ಎಸೆತದಲ್ಲಿ 51 ರನ್ ಗಳಿಸಿದ ಕ್ಲಾಸೆನ್
16 ನೇ ಓವರ್ ಎಸೆಯಲು ಬಂದ ಜಸ್ಪ್ರೀತ್ ಬುಮ್ರಾ
15ನೇ ಓವರ್ | 4 1WD 1WD 0 6 6 4 2