ಟಿ20 ವಿಶ್ವಕಪ್ | ಎಲ್ಲ 20 ತಂಡಗಳ ಸೂಪರ್-8 ಅವಕಾಶದತ್ತ ಒಂದು ಚಿತ್ತ

Update: 2024-06-11 16:19 GMT

PC : NDTV 

ನ್ಯೂಯಾರ್ಕ್ : ವೆಸ್ಟ್ಇಂಡೀಸ್ ಹಾಗೂ ಅಮೆರಿಕದಲ್ಲಿ ಈಗ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ನಲ್ಲಿ ಆಘಾತಕಾರಿ ಫಲಿತಾಂಶಗಳು ಹಾಗೂ ಅಮೋಘ ಪ್ರದರ್ಶನಗಳು ಹೊರಹೊಮ್ಮಿವೆ.

ಪಂದ್ಯಾವಳಿ ನಡೆಯುತ್ತಿರುವಾಗಲೇ ಸೂಪರ್ ಎಂಟು ಹಂತಕ್ಕೇರಲು ಪ್ರತಿ ತಂಡ ಏನು ಮಾಡಬೇಕಾಗಿದೆ ಎನ್ನುವತ್ತ ಒಂದು ಚಿತ್ತ.

A ಗುಂಪು

ತಂಡಗಳು: ಭಾರತ, ಅಮೆರಿಕ, ಕೆನಡಾ, ಪಾಕಿಸ್ತಾನ, ಐರ್ಲ್ಯಾಂಡ್

1. ಭಾರತ(4 ಅಂಕ, 1.455 ನೆಟ್ರನ್ರೇಟ್): ಎರಡರಲ್ಲಿ ಜಯ ಹಾಗೂ ಉತ್ತಮ ರನ್ರೇಟ್ನೊಂದಿಗೆ ಭಾರತ ಸೂಪರ್-8 ಹಂತಕ್ಕೇರುವ ಉತ್ತಮ ಸ್ಥಿತಿಯಲ್ಲಿದೆ. ಅಮೆರಿಕ ಅಥವಾ ಕೆನಡಾ ವಿರುದ್ಧದ ಗೆಲುವು ಭಾರತದ ಸೂಪರ್-8 ಅರ್ಹತೆಯನ್ನು ನಿರ್ಧರಿಸುವ ಸಾಧ್ಯತೆಯಿದೆ.

2. ಅಮೆರಿಕ(4 ಅಂಕ,0.626 ರನ್ರೇಟ್): ಅಮೆರಿಕ ತಂಡ ಟೂರ್ನಿಯಲ್ಲಿ ಸಮರ್ಪಕ ಆರಂಭ ಪಡೆದಿದ್ದು, ಇನ್ನುಳಿದ ಪಂದ್ಯಗಳಲ್ಲಿ ಭಾರತ ಇಲ್ಲವೇ ಐರ್ಲ್ಯಾಂಡ್ ವಿರುದ್ಧ ಗೆಲುವು ಮುಂದಿನ ಸುತ್ತಿಗೇರಲು ಸಾಕಾಗಲಿದೆ.

3. ಕೆನಡಾ(2 ಅಂಕ, -0.274 ರನ್ರೇಟ್): ಸೂಪರ್-8 ಸ್ಪರ್ಧೆಯಲ್ಲಿ ಉಳಿದುಕೊಳ್ಳಲು ಕೆನಡಾ ತಂಡ ಮುಂಬರುವ ಪಾಕಿಸ್ತಾನ ಹಾಗೂ ಭಾರತ ವಿರುದ್ದದ ಪಂದ್ಯವನ್ನು ಗೆಲ್ಲಲೇಬೇಕಾಗಿದೆ. ಪಾಕಿಸ್ತಾನ ತಂಡವನ್ನು ಮಣಿಸುವುದು ನಿರ್ಣಾಯಕವಾಗಿದೆ.

4. ಪಾಕಿಸ್ತಾನ(0 ಅಂಕ, -0.150 ರನ್ರೇಟ್): ಪಾಕಿಸ್ತಾನ ತಂಡ ತನ್ನ ನೆಟ್ರನ್ರೇಟ್ ಸುಧಾರಿಸಿಕೊಳ್ಳಲು ಕೆನಡಾ ಹಾಗೂ ಐರ್ಲ್ಯಾಂಡ್ ವಿರುದ್ದದ ಉಳಿದಿರುವ ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ. ಭಾರತ ಅಥವಾ ಅಮೆರಿಕ ತಂಡ ತಮ್ಮ ಪಂದ್ಯಗಳನ್ನು ಸೋಲುವುದನ್ನು ನಿರೀಕ್ಷಿಸಬೇಕಾಗುತ್ತದೆ.

5.ಐರ್ಲ್ಯಾಂಡ್(0 ಅಂಕ, -1.712 ರನ್ ರೇಟ್): ಐರ್ಲ್ಯಾಂಡ್ ತಂಡ ಅಮೆರಿಕ ಹಾಗೂ ಪಾಕಿಸ್ತಾನ ವಿರುದ್ದದ ಪಂದ್ಯವನ್ನು ಗೆಲ್ಲಬೇಕಾಗಿದೆ. ಉಳಿದ ಫಲಿತಾಂಶಗಳು ಅದರ ಪರವಾಗಿರಬೇಕಾಗುತ್ತದೆ. ಈಗಿನ ಸನ್ನಿವೇಶದಲ್ಲಿ ಐರ್ಲ್ಯಾಂಡ್ಗೆ ಇದು ಕಷ್ಟಸಾಧ್ಯ.

ಬಿ ಗುಂಪು

ತಂಡಗಳು: ಸ್ಕಾಟ್ಲ್ಯಾಂಡ್, ಆಸ್ಟ್ರೇಲಿಯ, ನಮೀಬಿಯಾ, ಇಂಗ್ಲೆಂಡ್, ಒಮಾನ್

1.ಸ್ಕಾಟ್ಲ್ಯಾಂಡ್(5 ಅಂಕ, 2.164 ರನ್ರೇಟ್): ಆಸ್ಟ್ರೇಲಿಯ ವಿರುದ್ಧ ಗೆಲುವು ಸ್ಕಾಟ್ಲ್ಯಾಂಡ್ಗೆ ಸೂಪರ್-8 ಸ್ಥಾನವನ್ನು ಖಚಿತಪಡಿಸಲಿದೆ. ಸ್ಕಾಟ್ಲ್ಯಾಂಡ್ ಈಗಾಗಲೇ ಇತರ ಫಲಿತಾಂಶವನ್ನು ಅವಲಂಬಿಸಿ ಮುಂದಿನ ಸುತ್ತಿಗೇರುವಷ್ಟು ಅಂಕಗಳನ್ನು ಹೊಂದಿದೆ.

2. ಆಸ್ಟ್ರೇಲಿಯ(4 ಅಂಕ, 1.875 ರನ್ರೇಟ್): ಇನ್ನೊಂದು ಗೆಲುವು, ಅದರಲ್ಲೂ ಮುಖ್ಯವಾಗಿ ಸ್ಕಾಟ್ಲ್ಯಾಂಡ್ ವಿರುದ್ಧ ಮೇಲುಗೈ ಸಾಧಿಸಿದರೆ ಮುಂದಿನ ಸುತ್ತಿಗೇರುವ ಸಾಧ್ಯತೆಯಿದೆ.

3.ನಮೀಬಿಯಾ(2 ಅಂಕ, -0.309 ರನ್ರೇಟ್): ಮುಂದಿನ ಸುತ್ತಿಗೇರಲು ನಮೀಬಿಯಾ ತಂಡ ಆಸ್ಟ್ರೇಲಿಯ ಹಾಗೂ ಇಂಗ್ಲೆಂಡ್ ವಿರುದ್ಧದ ಉಳಿದಿರುವ ಎರಡೂ ಪಂದ್ಯಗಳನ್ನು ಜಯಿಸಬೇಕಾಗಿದೆ. ಇದು ಸವಾಲಿನ ವಿಷಯವಾಗಿದೆ.

4. ಇಂಗ್ಲೆಂಡ್(1 ಅಂಕ, -1.800 ರನ್ರೇಟ್): ಇಂಗ್ಲೆಂಡ್ ಸೂಪರ್-8ಕ್ಕೇರಲು ಒಮಾನ್ ಹಾಗೂ ನಮೀಬಿಯಾ ವಿರುದ್ಧದ ಉಳಿದಿರುವ ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ. ಇತರ ಪಂದ್ಯಗಳು ಅದರಲ್ಲೂ ಮುಖ್ಯವಾಗಿ ಆಸ್ಟ್ರೇಲಿಯ-ಸ್ಕಾಟ್ಲ್ಯಾಂಡ್ ನಡುವಿನ ಪಂದ್ಯದ ಫಲಿತಾಂಶ ತನ್ನ ಪರವಾಗಿರುವಂತೆ ಹಾರೈಸಬೇಕಾಗಿದೆ.

5. ಒಮಾನ್(0 ಅಂಕ, -1.613 ರನ್ರೇಟ್): ಒಮಾನ್ ಈಗಾಗಲೇ ಸ್ಪರ್ಧೆಯಿಂದ ನಿರ್ಗಮಿಸಿದೆ.

ಗ್ರೂಪ್ ಸಿ

ತಂಡಗಳು: ಅಫ್ಘಾನಿಸ್ತಾನ, ವೆಸ್ಟ್ಇಂಡೀಸ್, ಉಗಾಂಡ, ಪಪುವಾ ನ್ಯೂ ಗಿನಿ, ನ್ಯೂಝಿಲ್ಯಾಂಡ್

1.ಅಫ್ಘಾನಿಸ್ತಾನ(4 ಅಂಕ, 5.255 ರನ್ರೇಟ್): ಪಪುವಾ ನ್ಯೂಗಿನಿ ಅಥವಾ ವೆಸ್ಟ್ಇಂಡೀಸ್ ವಿರುದ್ಧ ಇನ್ನೊಂದು ಪಂದ್ಯದಲ್ಲಿ ಜಯ ಸಾಧಿಸಿದರೆ ಸೂಪರ್-8 ಸ್ಥಾನ ಖಚಿತವಾಗಲಿದೆ.

2. ವೆಸ್ಟ್ಇಂಡೀಸ್(4 ಅಂಕ, 3.574 ರನ್ರೇಟ್): ಮುಂದಿನ ಸುತ್ತಿಗೇರಲು ನ್ಯೂಝಿಲ್ಯಾಂಡ್ ಅಥವಾ ಅಫ್ಘಾನಿಸ್ತಾನ ವಿರುದ್ದದ ಪಂದ್ಯವನ್ನು ಗೆಲ್ಲುವ ಅಗತ್ಯವಿದೆ.

3.ಉಗಾಂಡ(2 ಅಂಕ, -4.217 ರನ್ರೇಟ್): ಉಗಾಂಡಕ್ಕೆ ನ್ಯೂಝಿಲ್ಯಾಂಡ್ ವಿರುದ್ಧ ಭರ್ಜರಿ ಜಯ ಸಾಧಿಸಬೇಕಾಗಿದೆ ಹಾಗೂ ಇತರ ಫಲಿತಾಂಶಗಳು ಅದರ ಪರವಾಗಿರಬೇಕಾಗುತ್ತದೆ.

4. ಪಪುವಾ ನ್ಯೂ ಗಿನಿ(0 ಅಂಕ, -0.434 ರನ್ರೇಟ್): ಪಿಎನ್ಜಿ ತಂಡ ಸೂಪರ್-8 ಹಂತಕ್ಕೇರುವ ಸಾಧ್ಯತೆ ಇಲ್ಲ. ಒಂದಷ್ಟು ಅನುಭವ ಗಳಿಸಿಕೊಳ್ಳುವ ಗುರಿ ಇಟ್ಟುಕೊಂಡಿದೆ.

5. ನ್ಯೂಝಿಲ್ಯಾಂಡ್(0 ಅಂಕ, -4.200 ರನ್ರೇಟ್): ನ್ಯೂಝಿಲ್ಯಾಂಡ್ ತಂಡ ವೆಸ್ಟ್ಇಂಡೀಸ್, ಉಗಾಂಡ ಹಾಗೂ ಪಪುವಾ ನ್ಯೂ ಗಿನಿ ವಿರುದ್ಧ್ದದ ಉಳಿದಿರುವ ಎಲ್ಲ ಪಂದ್ಯಗಳನ್ನು ಗೆಲ್ಲುವ ಅಗತ್ಯವಿದೆ.

ಡಿ ಗುಂಪು

ತಂಡಗಳು: ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ನೆದರ್ಲ್ಯಾಂಡ್ಸ್, ನೇಪಾಳ, ಶ್ರೀಲಂಕಾ

1.ದಕ್ಷಿಣ ಆಫ್ರಿಕಾ(6 ಅಂಕ, 0.603 ರನ್ರೇಟ್): ಸದ್ಯ ಸುಸ್ಥಿತಿಯಲ್ಲಿರುವ ದಕ್ಷಿಣ ಆಫ್ರಿಕಾ ತಂಡ ಸೂಪರ್-8 ಹಂತಕ್ಕೇರುವ ಹೊಸ್ತಿಲಲ್ಲಿದೆ.

2. ಬಾಂಗ್ಲಾದೇಶ(2 ಅಂಕ, 0.075 ರನ್ರೇಟ್): ನೆದರ್ಲ್ಯಾಂಡ್ಸ್ ತಂಡವನ್ನು ಮಣಿಸುವುದು ನಿರ್ಣಾಯಕ. ನೇಪಾಳ ವಿರುದ್ಧದ ಗೆಲುವು ಮುಂದಿನ ಸುತ್ತಿಗೇರಲು ನೆರವಾಗಬಹುದು.

3. ನೆದರ್ಲ್ಯಾಂಡ್ಸ್(2ಅಂಕ, 0.024 ರನ್ರೇಟ್): ಮುಂದಿನ ಸುತ್ತಿಗೆ ತೇರ್ಗಡೆಯಾಗಲು ಡಚ್ಚರು ಬಾಂಗ್ಲಾದೇಶ ಹಾಗೂ ನೇಪಾಳ ವಿರುದ್ದ ಗೆಲುವು ಸಾಧಿಸುವ ಅಗತ್ಯವಿದೆ.

4. ನೇಪಾಳ(0 ಅಂಕ, -0.539 ರನ್ರೇಟ್): ನೇಪಾಳ ತಂಡಕ್ಕೆ ಮುಂದಿನ ಸುತ್ತಿಗೇರುವ ಅವಕಾಶ ಲಭಿಸಲು ಇನ್ನುಳಿದ ಪಂದ್ಯಗಳನ್ನು ಗೆಲ್ಲಲೇಬೇಕು. ಪ್ರಸಕ್ತ ಫಾರ್ಮ್ ಗಮನಿಸಿದರೆ ಇದೊಂದು ಸವಾಲಿನ ಸಂಗತಿ.

5. ಶ್ರೀಲಂಕಾ(0 ಅಂಕ, -0.777 ರನ್ರೇಟ್): ಸೂಪರ್-8 ಹಂತಕ್ಕೇರಲು ಶ್ರೀಲಂಕಾಕ್ಕೆ ನೇಪಾಳ ಹಾಗೂ ನೆದರ್ಲ್ಯಾಂಡ್ಸ್ ವಿರುದ್ಧ ಬೃಹತ್ ಅಂತರದಿಂದ ಗೆಲ್ಲುವ ಅಗತ್ಯವಿದೆ. ಇತರ ತಂಡಗಳ ಫಲಿತಾಂಶಗಳನ್ನು ಅವಲಂಬಿಸಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News