ದೇಶೀಯ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳಿ | ಭಾರತದ ಅಂತರರಾಷ್ಟ್ರೀಯ ಕ್ರಿಕೆಟಿಗರಿಗೆ ಬಿಸಿಸಿಐ ನಿರ್ದೇಶನ
Update: 2024-07-16 15:26 GMT
ಹೊಸದಿಲ್ಲಿ : ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಜಸ್‌ಪ್ರಿತ್ ಬುಮ್ರಾ ಸಹಿತ ಎಲ್ಲ ಸ್ಟಾರ್ ಕ್ರಿಕೆಟಿಗರು ರಾಷ್ಟ್ರೀಯ ಕರ್ತವ್ಯದಿಂದ ಬಿಡುವಾಗಿದ್ದಾಗ ದೇಶೀಯ ಕ್ರಿಕೆಟ್‌ನಲ್ಲಿ ಭಾಗವಹಿಸಬೇಕೆಂದು ಬಿಸಿಸಿಐ ನಿರ್ದೇಶನ ನೀಡಿದೆ.
ಆಟಗಾರರ ಫಾರ್ಮ್ ಹಾಗೂ ಸ್ಪರ್ಧಾತ್ಮಕತೆಯನ್ನು ಕಾಪಾಡಿಕೊಳ್ಳಲು ದೇಶೀಯ ಕ್ರಿಕೆಟ್‌ನ ಪಾತ್ರದ ಕುರಿತು ಬಿಸಿಸಿಐ ಗಮನ ಹರಿಸಿರುವುದು ಈ ಹೆಜ್ಜೆಯಿಂದ ಸಾಬೀತಾಗಿದೆ. ವಲಯ ಆಯ್ಕೆ ಸಮಿತಿಯ ಬದಲಿಗೆ ರಾಷ್ಟ್ರೀಯ ಆಯ್ಕೆ ಸಮಿತಿಯೇ ದುಲೀಪ್ ಟ್ರೋಫಿಗೆ ತಂಡಗಳನ್ನು ಆಯ್ಕೆ ಮಾಡಲಿದೆ.
ಮುಂಬರುವ ಆಗಸ್ಟ್‌ನಲ್ಲಿ ನಡೆಯುವ ಬಾಂಗ್ಲಾದೇಶ ಹಾಗೂ ನ್ಯೂಝಿಲ್ಯಾಂಡ್ ವಿರುದ್ಧ ಟೆಸ್ಟ್ ಸರಣಿಗೆ ಸಜ್ಜಾಗಲು ಟೆಸ್ಟ್ ಸ್ಪೆಷಲಿಸ್ಟ್ ಗಳು ಕನಿಷ್ಠ ಒಂದು ಅಥವಾ ಎರಡು ದುಲೀಪ್ ಟ್ರೋಫಿ ಪಂದ್ಯಗಳನ್ನು ಆಡಬೇಕು ಎಂದು ಬಿಸಿಸಿಐ ನಿರ್ದೇಶನ ನೀಡಿದೆ.