ಭಾರತ ಎ ತಂಡದ ಜೊತೆಗಿನ ಅಭ್ಯಾಸ ಪಂದ್ಯ ಕೈಬಿಟ್ಟ ಟೀಮ್ ಇಂಡಿಯಾ; ಕಾರಣವೇನು ಗೊತ್ತೇ?

Update: 2024-11-01 21:11 IST
India Test series

PC : PTI 

  • whatsapp icon

ಮುಂಬೈ: ಮುಂಬರುವ ಆಸ್ಟ್ರೇಲಿಯ ಪ್ರವಾಸದ ವೇಳೆ, ಭಾರತ ಎ ತಂಡದ ಜೊತೆಗೆ ಮೂರು ದಿನಗಳ ಪಂದ್ಯವೊಂದನ್ನು ಆಡುವ ನಿರ್ಧಾರವನ್ನು ಭಾರತೀಯ ಟೆಸ್ಟ್ ತಂಡ ಕೈಬಿಟ್ಟಿದೆ. ಬದಲಿಗೆ, ಆಸ್ಟ್ರೇಲಿಯದಲ್ಲಿ ನಡೆಯಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಮಾಡಿಕೊಳ್ಳಬೇಕಾಗಿರುವ ನಿರ್ದಿಷ್ಟ ಸಿದ್ಧತೆಗಳ ಮೇಲೆ ಹೆಚ್ಚಿನ ಗಮನ ನೀಡಲು ಹೆಚ್ಚುವರಿ ನೆಟ್ ಅಭ್ಯಾಸಗಳನ್ನು ನಡೆಸಲು ತಂಡ ಮುಂದಾಗಿದೆ.

ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯವು ಪರ್ತ್‌ನಲ್ಲಿ ನವೆಂಬರ್ 22ರಂದು ನಡೆಯಲಿದೆ.

ಭಾರತೀಯ ಟೆಸ್ಟ್ ತಂಡವು ರುತುರಾಜ್ ಗಾಯಕ್ವಾಡ್ ನೇತೃತ್ವದ ಭಾರತ ಎ ತಂಡದ ವಿರುದ್ಧ ಪರ್ತ್‌ನ ವಾಕ ಮೈದಾನದಲ್ಲಿ ಅಭ್ಯಾಸ ಪಂದ್ಯವೊಂದನ್ನು ಆಡಲು ನಿಗದಿಯಾಗಿತ್ತು. ಆದರೆ, ಈಗ ಅದನ್ನು ಕೈಬಿಟ್ಟು, ಅಧಿಕ ಬೌನ್ಸ್ ಲಭಿಸುವ ಮೈದಾನದಲ್ಲಿ ಹೆಚ್ಚುವರಿ ನೆಟ್ ಅಭ್ಯಾಸ ನಡೆಸಲು ಭಾರತೀಯ ಟೆಸ್ಟ್ ತಂಡ ಬಯಸಿದೆ.

ಪ್ರಧಾನ ಕೋಚ್ ಗೌತಮ್ ಗಂಭೀರ್ ಮತ್ತು ಹಿರಿಯ ಆಟಗಾರರ ಅಭಿಪ್ರಾಯಗಳ ಆಧಾರದಲ್ಲಿ ತಂಡವು ಈ ನಿರ್ಧಾರವನ್ನು ತೆಗೆದುಕೊಂಡಿದೆ ಎನ್ನಲಾಗಿದೆ. ಬದಲಿಗೆ ವೇಗ ಮತ್ತು ಬೌನ್ಸ್‌ಗಳನ್ನು ನಿಭಾಯಿಸುವ ತಂತ್ರಗಾರಿಕೆಗಳಿಗೆ ಇನ್ನಷ್ಟು ಮೊನಚು ನೀಡುವ ಉದ್ದೇಶದ ನೆಟ್ ಅಭ್ಯಾಸಗಳನ್ನು ಹೆಚ್ಚೆಚ್ಚು ಮಾಡಲು ಉದ್ದೇಶಿಸಲಾಗಿದೆ. ಮುಖ್ಯವಾಗಿ ತವರಿನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಕಳೆದುಕೊಂಡ ಬಳಿಕ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News