ವೆಸ್ಟ್ ಇಂಡೀಸ್‌ನಲ್ಲಿ ಬೆರಿಲ್ ಚಂಡಮಾರುತದ ಅಬ್ಬರ | T20 ವಿಶ್ವಕಪ್ ವಿಜೇತ ಭಾರತ ತಂಡದ ಸ್ವದೇಶ ವಾಪಸಾತಿಯಲ್ಲಿ ಮತ್ತಷ್ಟು ವಿಳಂಬ
ಬಾರ್ಬಡೋಸ್: ದ್ವೀಪ ರಾಷ್ಟ್ರವಾದ ವೆಸ್ಟ್ ಇಂಡೀಸ್‌ನಲ್ಲಿ ಬೆರಿಲ್ ಚಂಡಮಾರುತದ ಅಬ್ಬರ ಮುಂದುವರಿದಿರುವುದರಿಂದ ಟಿ-20 ವಿಶ್ವಕಪ್ ಜಯಿಸಿರುವ ಭಾರತ, ಸ್ವದೇಶಕ್ಕೆ ಮರಳುವುದು ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಭಾರತ ತಂಡ ಗುರುವಾರ ಬೆಳಗ್ಗೆ 6 ಗಂಟೆಗೆ ದಿಲ್ಲಿಗೆ ಆಗಮಿಸುವ ನಿರೀಕ್ಷೆ ಇದೆ ಎಂದು ವರದಿಯಾಗಿದೆ.
ಮಂಗಳವಾರ ಸಂಜೆ ಆರು ಗಂಟೆಗೆ ಟೀಮ್ ಇಂಡಿಯಾ ಬಾರ್ಬೊಡೋಸ್‌ನಿಂದ ನಿರ್ಗಮಿಸಲಿದೆ ಎಂದು ಈ ಮುನ್ನ ಹೇಳಲಾಗಿತ್ತು. ಆದರೆ, ಬೆರಿಲ್ ಚಂಡಮಾರುತದ ತೀವ್ರತೆ ಇನ್ನೂ ಕಡಿಮೆಯಾಗದ ಕಾರಣ, ಭಾರತ ತಂಡ ಸ್ವದೇಶಕ್ಕೆ ಆಗಮಿಸುವುದು ಮತ್ತಷ್ಟು ವಿಳಂಬವಾಗಬಹುದು ಎಂದು ಹೇಳಲಾಗಿದೆ.
ಗುರುವಾರ ಬೆಳಗ್ಗೆ ಆರು ಗಂಟೆಯ ವೇಳೆಗೆ ಭಾರತ ತಂಡ ದಿಲ್ಲಿ ತಲುಪುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.
ಜೂನ್ 29ರಂದು ನಡೆದ ಟಿ-20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ, ಟ್ರೋಫಿಗೆ ಮುತ್ತಿಟ್ಟಿತ್ತು. ಆದರೆ, ಜೂನ್ 1ರಂದು ಬಾರ್ಬಡೋಸ್‌ಗೆ ಬೆರಿಲ್ ಚಂಡಮಾರುತ ಅಪ್ಪಳಿಸಿದ್ದರಿಂದ ಟೀಮ್ ಇಂಡಿಯಾ ಬಾರ್ಬಡೋಸ್‌ನಿಂದ ನಿರ್ಗಮಿಸುವುದು ಮುಂದೂಡಿಕೆಯಾಗುತ್ತಲೇ ಇದೆ.