ವಿನೇಶ್ ಫೋಗಟ್ ಮೇಲ್ಮನವಿ: ನಾಳೆ(ಆ.13) ಕ್ರೀಡಾ ನ್ಯಾಯ ಮಂಡಳಿಯಿಂದ ತೀರ್ಪು
Update: 2024-08-12 17:06 GMT
ಹೊಸದಿಲ್ಲಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಸ್ಪರ್ಧೆಯ ಚಿನ್ನದ ಪದಕ ಪಂದ್ಯಕ್ಕೆ ತನ್ನನ್ನು ಅನರ್ಹಗೊಳಿಸಿರುವುದರ ವಿರುದ್ಧ ಕುಸ್ತಿಪಟು ವಿನೇಶ್ ಫೋಗಟ್ ಸಲ್ಲಿಸಿರುವ ಮೇಲ್ಮನವಿ ಕುರಿತು ಕ್ರೀಡಾ ನ್ಯಾಯ ಮಂಡಳಿ(ಸಿಎಎಸ್)ನೀಡಲಿರುವ ತೀರ್ಪಿಗಾಗಿ ಭಾರತದ ಕ್ರೀಡಾ ಸಮುದಾಯ ಆತಂಕದಿಂದ ಕಾಯುತ್ತಿದೆ.
ವಿನೇಶ್ ಕುರಿತ ತೀರ್ಪನ್ನು ಮಂಗಳವಾರ(ಆ.13)ರಂದು ಪ್ರಕಟಿಸುವುದಾಗಿ ಸಿಎಎಸ್ ತಿಳಿಸಿದೆ. ಒಂದು ವೇಳೆ ವಿನೇಶ್ ಅವರ ಅದ್ಭುತ ಪ್ರದರ್ಶನ ಹಾಗೂ ಅವರ ಪ್ರಕರಣದ ಮಹತ್ವವನ್ನು ಗುರುತಿಸಿ ವಿನೇಶ್ ಪರ ಸಿಎಎಸ್ ತೀರ್ಪು ನೀಡಿದರೆ ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ವಿನೇಶ್ ಜಂಟಿ ಬೆಳ್ಳಿ ಪದಕ ಪಡೆಯಲಿದ್ದಾರೆ.