ತಮ್ಮ ಅನರ್ಹತೆಯ ವಿರುದ್ಧ ಮೇಲ್ಮನವಿ ಸಲ್ಲಿಸಿದ ವಿನೇಶ್ ಫೋಗಟ್: ಇಂದು ತೀರ್ಪು ಸಾಧ್ಯತೆ

Update: 2024-08-08 11:12 GMT

ವಿನೇಶ್ ಫೋಗಟ್ | PC : PTI 

ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ನ ಕುಸ್ತಿ ವಿಭಾಗದ ಫೈನಲ್ ಪಂದ್ಯದಿಂದ ತಮ್ಮನ್ನು ಅನರ್ಹಗೊಳಿಸಿರುವುದರ ವಿರುದ್ಧ ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ. ನಿಗದಿತ ತೂಕಕ್ಕಿಂತ ಕೇವಲ 100 ಗ್ರಾಮ್ ಹೆಚ್ಚಿದ್ದ ಕಾರಣ, ಅವರನ್ನು 50 ಕೆಜಿಯ ಮಹಿಳಾ ಕುಸ್ತಿ ಫೈನಲ್ ಪಂದ್ಯದಿಂದ ಅನರ್ಹಗೊಳಿಸಲಾಗಿತ್ತು. ಸೆಮಿಫೈನಲ್ ಪಂದ್ಯವನ್ನು 5-0 ಅಂತರದಲ್ಲಿ ಗೆದ್ದಿದ್ದ ವಿನೇಶ್ ಫೋಗಟ್, ಒಲಿಂಪಿಕ್ಸ್ ಇತಿಹಾಸದಲ್ಲಿ ಫೈನಲ್ ಪ್ರವೇಶಿಸಿದ್ದ ಪ್ರಪ್ರಥಮ ಭಾರತದ ಮಹಿಳಾ ಕುಸ್ತಿ ಪಟುವಾಗಿದ್ದರು.

ವಿನೇಶ್ ಫೋಗಟ್ ತಮಗೆ ರಜತ ಪದಕ ನೀಡಬೇಕು ಎಂದು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ತನ್ನ ತೀರ್ಪು ಪ್ರಕಟಿಸಲು ಆಗಸ್ಟ್ 8 (ಗುರುವಾರ) ಬೆಳಗ್ಗೆವರೆಗೆ ಸಮಯಾವಕಾಶ ನೀಡಬೇಕು ಎಂದು ನ್ಯಾಯಾಲಯವು ಕೋರಿದೆ. ಒಂದು ವೇಳೆ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯವೇನಾದರೂ ವಿನೇಶ್ ಪರ ತೀರ್ಪು ನೀಡಿದರೆ, ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯು ವಿನೇಶ್ ಗೆ ಜಂಟಿ ರಜತ ಪದಕ ನೀಡಬೇಕಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News