ವಿನೇಶ್ ಫೋಗಟ್ ಜಗತ್ತನ್ನೇ ಗೆಲ್ಲಲಿದ್ದಾಳೆ : ಬಜರಂಗ್ ಪುನಿಯಾ
Update: 2024-08-06 16:22 GMT
ಹೊಸದಿಲ್ಲಿ : ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಘಟಾನುಘಟಿ ಕುಸ್ತಿಪಟುಗಳನ್ನು ಮಣಿಸಿ ಮೊದಲ ಬಾರಿ ಸೆಮಿ ಫೈನಲ್ ಗೆ ಪ್ರವೇಶಿಸಿರುವ ಸಹ ಕುಸ್ತಿತಾರೆ ವಿನೇಶ್ ಫೋಗಟ್ ರನ್ನು ಭಾರತದ ಸಿಂಹಿಣಿ ಎಂದು ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ವಿಜೇತ ಕುಸ್ತಿಪಟು ಬಜರಂಗ್ ಪುನಿಯಾ ಮಂಗಳವಾರ ಬಣ್ಣಿಸಿದ್ದಾರೆ.
ವಿನೇಶ್ 50 ಕೆಜಿ ವಿಭಾಗದಲ್ಲಿ ಹಾಲಿ ಚಾಂಪಿಯನ್ ಯುಯಿ ಸುಸಾಕಿ ಹಾಗೂ ಉನ್ನತ ರ್ಯಾಂಕಿನ ಒಕ್ಸಾನಾ ಲಿವಾಚ್ರನ್ನು ಮಣಿಸಿ ಚಕಿತಗೊಳಿಸಿದ್ದರು.
ವಿನೇಶ್ ಅವರು ಇಂದು ಸತತ ಪಂದ್ಯಗಳನ್ನು ಜಯಿಸಿ ಸಿಂಹಿಣಿಯಾಗಿದ್ದಾರೆ. 4 ಬಾರಿಯ ವಿಶ್ವ ಚಾಂಪಿಯನ್ ಹಾಗೂ ಹಾಲಿ ಒಲಿಂಪಿಕ್ಸ್ ಚಾಂಪಿಯನ್ ಕುಸ್ತಿಪಟುಗಳನ್ನು ಮಣಿಸಿದ್ದಾರೆ. ಅವರು ಕ್ವಾರ್ಟರ್ ಫೈನಲ್ನಲ್ಲಿ ಮಾಜಿ ವಿಶ್ವ ಚಾಂಪಿಯನ್ ಕುಸ್ತಿಪಟುವನ್ನು ಸೋಲಿಸಿದ್ದರು ಎಂದು ಪುನಿಯಾ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.