ಆರ್‌ಸಿಬಿ ಪರ ಗರಿಷ್ಠ ಸಿಕ್ಸರ್: ಗೇಲ್ ದಾಖಲೆ ಮುರಿದ ವಿರಾಟ್ ಕೊಹ್ಲಿ
ಬೆಂಗಳೂರು: ಬ್ಯಾಟಿಂಗ್ ಮಾಂತ್ರಿಕ ವಿರಾಟ್ ಕೊಹ್ಲಿ ಆರ್‌ಸಿಬಿ ಪರ ಗರಿಷ್ಠ ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಕ್ರಿಸ್ ಗೇಲ್ ದಾಖಲೆಯನ್ನು ಮುರಿದರು.
ಕೊಹ್ಲಿ ಈ ತನಕ ಆರ್‌ಸಿಬಿ ಪರ 241 ಸಿಕ್ಸರ್‌ಗಳನ್ನು ಸಿಡಿಸಿ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದು ಗೇಲ್ (239 ಸಿಕ್ಸರ್), ಎಬಿ ಡಿವಿಲಿಯರ್ಸ್(238), ಗ್ಲೆನ್ ಮ್ಯಾಕ್ಸ್‌ವೆಲ್(67) ಹಾಗೂ ಎಫ್‌ಡು ಪ್ಲೆಸಿಸ್(50) ಆ ನಂತರದ ಸ್ಥಾನದಲ್ಲಿದ್ದಾರೆ.
ಕೊಹ್ಲಿ ಅವರು 2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದ ಏಕೈಕ ಫ್ರಾಂಚೈಸಿಯನ್ನು ಪ್ರತಿನಿಧಿಸುವ ಮೂಲಕ ವಿಶಿಷ್ಟ ದಾಖಲೆ ನಿರ್ಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಆರ್‌ಸಿಬಿ ಪರ ಟೂರ್ನಮೆಂಟ್‌ನಲ್ಲಿ 241 ಸಿಕ್ಸರ್ ಸಿಡಿಸಲು ಸಾಧ್ಯವಾಗಿದೆ.
ಈ ದಾಖಲೆಯ ಹಾದಿಯಲ್ಲಿ ಕೊಹ್ಲಿ ಅವರು ಭಾರತದ ಲೆಜೆಂಡ್ ಎಂ.ಎಸ್. ಧೋನಿ(239) ದಾಖಲೆಯನ್ನು ಹಿಂದಿಕ್ಕಿ ಐಪಿಎಲ್‌ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದವರ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಗೇಲ್ 357 ಸಿಕ್ಸರ್ ಸಿಡಿಸಿ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಆ ನಂತರ ರೋಹಿತ್ ಶರ್ಮಾ(261) ಹಾಗೂ ಎಬಿ ಡಿವಿಲಿಯರ್ಸ್(251), ವಿರಾಟ್ ಕೊಹ್ಲಿ(241) ಹಾಗೂ ಧೋನಿ(239) ಅವರಿದ್ದಾರೆ.
ಐಪಿಎಲ್‌ನಲ್ಲಿ ಗರಿಷ್ಠ ಸಿಕ್ಸರ್ ಸಾಧಕರ ಪಟ್ಟಿ
ಕ್ರಿಸ್ ಗೇಲ್-357
ರೋಹಿತ್ ಶರ್ಮಾ-261
ಎಬಿಡಿ ವಿಲಿಯರ್ಸ್-251
ವಿರಾಟ್ ಕೊಹ್ಲಿ-241
ಎಂ.ಎಸ್ ಧೋನಿ-239