ವಿಶ್ವಕಪ್ 2023: ಮೂರು ಭರ್ಜರಿ ಅಂತರದ ಗೆಲುವು ದಾಖಲಿಸಿದ ದಕ್ಷಿಣ ಆಫ್ರಿಕಾ
ಹೊಸದಿಲ್ಲಿ: ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ವಿಶ್ವಕಪ್ 2023 ಟೂರ್ನಿಯಲ್ಲಿ ಮೂರು ಬೃಹತ್ ಮೊತ್ತದ ಅಂತರದಲ್ಲಿ ಜಯ ಸಾದಿಸುವ ಮೂಲಕ ದಕ್ಷಿಣ ಆಫ್ರಿಕಾ ಬಲಿಷ್ಟ ತಂಡವಾಗಿ ಹೊರಹೊಮ್ಮಿದೆ.
ಅ.7 ರಂದು ಹೊಸದಿಲ್ಲಿಯಲ್ಲಿ ನಡೆದ ಶ್ರಿಲಂಕಾ ವಿರುದ್ದದ ಪಂದ್ಯದಲ್ಲಿ ಕ್ವಿಂಟನ್ ಡಿಕಾಕ್, ವಾನ್ ಡರ್ ಡುಸ್ಸನ್ ಐಡೆನ್ ಮಾಕ್ರಮ್ ಶತಕದ ನೆರವಿನಿಂದ 428 ರನ್ ಬಾರಿಸಿತ್ತು. ಈ ಕಠಿಣ ಗುರಿ ಬೆನ್ನತ್ತಿದ ಲಂಕಾ 326 ರನ್ ಗೆ ಆಲೌಟ್ ಆಗುವ ಮೂಲಕ ಹರಿಣ ಗಳು ಪಂದ್ಯವನ್ನು 102 ರನ್ ಗಳಿಂದ ಗೆದ್ದು ಕೊಂಡರು.
ಅ.12 ರಂದು ಲಕ್ನೋದಲ್ಲಿ ನಡೆದ ಆಸ್ಟ್ರೇಲಿಯ ವಿರುದ್ದದ ಪಂದ್ಯದಲ್ಲಿ ಕ್ವಿಂಟನ್ ಡಿಕಾಕ್ ರ ಶತಕ ಹಾಗೂ ಮಾಕ್ರಮ್ ಅರ್ಧಶತಕದ ನೆರವಿನಿಂದ 311 ರನ್ ಬಾರಿಸಿತು. ಈ ಗುರಿ ಬೆನ್ನಟ್ಟಲಾರದ ಆಸೀಸ್ 177 ರನ್ ಗೆ ಆಲೌಟ್ ಅಗಿ. ದಕ್ಷಿಣ ಆಫ್ರಿಕಾ 134 ರನ್ ಗಳಿಂದ ಗೆದ್ದುಕೊಂಡಿತು.
ಅ.21 (ಇಂದು) ಮುಂಬೈ ನಲ್ಲಿ ನಡೆದ ಇಂಗ್ಲೆಂಡ್ ವಿರುದ್ದದ ಪಂದ್ಯದಲ್ಲಿ ಹೆನ್ರಿಕ್ ಕ್ಲಾಸನ್ ಸ್ಪೋಟಕ ಶತಕ ಹಾಗೂ ರೀಝ ಹೆಂಡ್ರಿಕ್ಸ್, ರಸ್ಸಿ ವಾನ್ ಡರ್ ಡುಸ್ಸನ್ ಮತ್ತು ಮಾರ್ಕೋ ಜಾನ್ಸನ್ ಆಕರ್ಷಕ ಅರ್ಧಶತಕದ ನೆರವಿಂದ 399 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಬೃಹತ್ ಗುರಿ ಚೇಸ್ ಮಾಡುವಲ್ಲಿ ಎಡವಿದ ಆಂಗ್ಲರು 170 ರನ್ ಗಳಿಗೆ ಸರ್ವಪತನ ಕಂಡರು. ಇದರಿಂದ ದಕ್ಷಿಣ ಆಫ್ರಿಕಾ 229 ರನ್ ಗಳ ಬೃಹತ್ ಗೆಲುವು ದಾಖಲಿಸಿತು.
ಆದರೆ ಅ.17 ರಂದು ನಡೆದ ನೆದರ್ಲ್ಯಾಂಡ್ಸ್ ವಿರುದ್ಧ ಪಂದ್ಯದಲ್ಲಿ 38 ರನ್ ಗಳಿಂದ ಸೋಲು ಅನುಭವಿಸಿ ಆಘಾತ ಎದುರಿಸಿತ್ತು.