ವರ್ಲ್ಡ್ ಗೇಮ್ಸ್: ಐತಿಹಾಸಿಕ ಸ್ವರ್ಣ ಜಯಿಸಿದ ಭಾರತದ ಮಹಿಳಾ ಅಂಧರ ಕ್ರಿಕೆಟ್ ತಂಡ
ಬರ್ಮಿಂಗ್ಹ್ಯಾಮ್: ಅಂತರ್ರಾಷ್ಟ್ರೀಯ ಅಂಧರ ಕ್ರೀಡಾ ಒಕ್ಕೂಟದ ವರ್ಲ್ಡ್ ಗೇಮ್ಸ್-2023ರಲ್ಲಿ ರವಿವಾರ ನಡೆದ ಮಳೆಬಾಧಿತ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯವನ್ನು 9 ವಿಕೆಟ್ಗಳಿಂದ ಮಣಿಸಿದ ಭಾರತೀಯ ಮಹಿಳಾ ಅಂಧರ ಕ್ರಿಕೆಟ್ ತಂಡ ಚಿನ್ನದ ಪದಕ ಜಯಿಸಿ ಇತಿಹಾಸ ನಿರ್ಮಿಸಿದೆ.
ಭಾರತದ ಮಹಿಳಾ ತಂಡ ವರ್ಲ್ಡ್ ಗೇಮ್ಸ್ನಲ್ಲಿ ಚಿತ್ತಾಕರ್ಷಕ ಪ್ರದರ್ಶನ ನೀಡಿ ಎಲ್ಲರ ಹೃದಯ ಗೆದ್ದಿದೆ. ಟೂರ್ನಿಯ ಎಲ್ಲ ಲೀಗ್ ಪಂದ್ಯಗಳನ್ನು ಜಯಿಸಿದ್ದ ಭಾರತ ಅಜೇಯ ದಾಖಲೆ ಕಾಯ್ದುಕೊಂಡಿದೆ.
ಭಾರತವು ಆಸ್ಟ್ರೇಲಿಯವನ್ನು 20 ಓವರ್ಗಳಲ್ಲಿ 8 ವಿಕೆಟ್ಗೆ 114 ರನ್ಗೆ ನಿಯಂತ್ರಿಸಿತು. ಪರಿಷ್ಕೃತ ಗುರಿ 42 ರನ್ ಪಡೆದ ಭಾರತವು 4ನೇ ಓವರ್ನಲ್ಲಿ ಚೇಸಿಂಗ್ ಮಾಡಿತು.
ಐಬಿಎಸ್ಎ ವರ್ಲ್ಡ್ ಗೇಮ್ಸ್ನಲ್ಲಿ ಅಂಧರ ಕ್ರಿಕೆಟ್ ಕಳೆದ ವಾರ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯ ನಡುವಿನ ಪಂದ್ಯದ ಮೂಲಕ ಆರಂಭವಾಗಿತ್ತು. ಇದು ವರ್ಲ್ಡ್ ಗೇಮ್ಸ್ನ ಮೊದಲ ಫೈನಲ್ ಪಂದ್ಯವಾಗಿದೆ. ಆಸ್ಟ್ರೇಲಿಯವನ್ನು ಭರ್ಜರಿಯಾಗಿ ಮಣಿಸಿರುವ ಭಾರತ ಈಗ ಪ್ರಶಸ್ತಿ ಜಯಿಸಿದೆ.