2011ರ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಗೆ ಸಲ್ಲಬೇಕಾದ ಶ್ರೇಯಸ್ಸು ಸಲ್ಲಲಿಲ್ಲ: ಗೌತಮ್ ಗಂಭೀರ್

Update: 2023-12-09 14:45 GMT

Photo: x/@sureshraina

ಹೊಸ ದಿಲ್ಲಿ: 2011ರಲ್ಲಿ ಭಾರತ ತಂಡವು ವಿಶ್ವಕಪ್ ಜಯಿಸಿದಾಗ, ಆಲ್ ರೌಂಡರ್ ಯುವರಾಜ್ ಸಿಂಗ್ ಅವರಿಗೆ ಅದಕ್ಕಾಗಿ ಸಲ್ಲಬೇಕಾಗಿದ್ದಷ್ಟು ಶ್ರೇಯಸ್ಸು ಸಲ್ಲಲಿಲ್ಲ ಎಂದು ಮಾಜಿ ಭಾರತೀಯ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿದ್ದಾರೆ ಎಂದು aninews.in ವರದಿ ಮಾಡಿದೆ.

“ನಿಮಗಿದು ತಿಳಿದಿದೆ. ಆದರೆ, 2011ರ ಕ್ರೀಡಾಕೂಟದ ಶ್ರೇಷ್ಠ ಆಟಗಾರರಾಗಿದ್ದ ಯುವರಾಜ್ ಸಿಂಗ್ ಬಗ್ಗೆ ಮಾತನಾಡಿರುವ ಒಬ್ಬ ಆಟಗಾರನ ಬಗ್ಗೆ ನನಗೆ ದಯವಿಟ್ಟು ತಿಳಿಸಿ. ಎಷ್ಟು ಜನ ಅವರ ಬಗ್ಗೆ ಮಾತನಾಡಿದ್ದಾರೆ, ಯಾಕೆ? ಬಹುಶಃ ಅವರ ಬಳಿ ಉತ್ತಮ ಸಾರ್ವಜನಿಕ ಸಂಪರ್ಕಾಧಿಕಾರಿ ಸಂಸ್ಥೆ ಇರಲಿಲ್ಲವೆನಿಸುತ್ತದೆ. ವಿಶ್ವಕಪ್ ಗೆಲುವಿನಲ್ಲಿ ಅವರ ಪಾತ್ರವನ್ನು ಕಡಿಮೆ ಅಂದಾಜು ಮಾಡಲಾಗಿದೆ ಎಂಬುದು ತೀರಾ ಅನ್ಯಾಯಕಾರಿ ಪದವಾಗಿದೆ. ಆದರೆ, ಅವರ ಪ್ರದರ್ಶನವನ್ನು ನಿಜವಾಗಿಯೂ ಕಡಿಮೆ ಅಂದಾಜು ಮಾಡಲಾಯಿತು. ನೀವು ಆತನ ಪ್ರದರ್ಶನದ ಕುರಿತು ಮಾತನಾಡುವ ವ್ಯಕ್ತಿಯನ್ನು ತೋರಿಸದಿದ್ದರೆ, ಅವರಿಗೆ ಅದು ತಿಳಿದಿಲ್ಲವೆಂದು ಅರ್ಥ. ಅಂಥವರು ಓರ್ವ ವ್ಯಕ್ತಿಯನ್ನು ತೋರಿಸುತ್ತಾರೆ ಹಾಗೂ ಆ ವ್ಯಕ್ತಿಯು ಗೆಲುವಿನ ಬ್ರ್ಯಾಂಡ್ ಅಂಬಾಸಡರ್ ಆಗಿಬಿಡುತ್ತಾನೆ” ಎಂದು ಎಎನ್ಐ ಪಾಡ್ ಕಾಸ್ಟ್ ವಿತ್ ಸ್ಮಿತಾ ಪ್ರಕಾಶ್ ಕಾರ್ಯಕ್ರಮದಲ್ಲಿ ಗೌತಮ್ ಗಂಭೀರ್ ಹೇಳಿದ್ದಾರೆ.

2011ರ ವಿಶ್ವಕಪ್ ನಲ್ಲಿ ಆಲ್ ರೌಂಡರ್ ಯುವರಾಜ್ ಸಿಂಗ್ ಅವರು 362 ರನ್ ಗಳಿಸಿ, 15 ವಿಕೆಟ್ ಗಳನ್ನೂ ಕಿತ್ತಿದ್ದರು. ಆ ಕ್ರೀಡಾಕೂಟದಲ್ಲಿ ಅವರು ನಾಲ್ಕು ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಈ ಸಂಖ್ಯೆಯು 1996ರಲ್ಲಿ ಅರವಿಂದ ಡಿ ಸಿಲ್ವಾ, 1999ರಲ್ಲಿ ದಕ್ಷಿಣ ಆಫ್ರಿಕಾದ ಲಾನ್ಸ್ ಕ್ಲೂಸನರ್ ಹಾಗೂ 2019ರಲ್ಲಿ ಅವರ ಸಹ ಆಟಗಾರ ರೋಹಿತ್ ಶರ್ಮಾ ತೋರಿದ್ದ ಸಾಧನೆಗೆ ಸಮನಾಗಿತ್ತು.

ಹೀಗಾಗಿ, 2011ರಲ್ಲಿ ವಿಶ್ವಕಪ್ ಗೆಲುವಿನಲ್ಲಿ ಯುವರಾಜ್ ಸಿಂಗ್ ಅವರ ಪಾತ್ರವನ್ನು ಕಡೆಗಣಿಸಲಾಗಿದೆ ಎಂಬ ಗೌತಮ್ ಗಂಭೀರ್ ಆರೋಪವು ಮಹತ್ವ ಪಡೆದುಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News