ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 1 ಕೋಟಿ ರೂ. ಮೌಲ್ಯದ ಚಿನ್ನ ವಶ

Update: 2023-10-14 15:02 GMT

 ಚಿತ್ರ ಕೃಪೆ- twitter@blrcustoms

ಬೆಂಗಳೂರು, ಅ.14: ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಮೂವರು ಪ್ರಯಾಣಿಕರಿಂದ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಒಂದು ಕೋಟಿ ಮೌಲ್ಯದ 1.7 ಕೆಜಿ ಚಿನ್ನವನ್ನು ಜಪ್ತಿ ಮಾಡಿದ್ದಾರೆ.

ಸಿಂಗಾಪುರ ಏರ್‌ ಲೈನ್ಸ್‌ ನ ಎಸ್ ಕ್ಯೂ-510 ವಿಮಾನದಲ್ಲಿ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕನನ್ನು ತಪಾಸಣೆ ನಡೆಸಿ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮರೆಮಾಚಿ ಚಿನ್ನವನ್ನ ಸಾಗಿಸುತ್ತಿರುವುದು ಮಾತ್ರವಲ್ಲದೆ, 4 ಲ್ಯಾಪ್ ಟ್ಯಾಪ್‍ಗಳ ಕಳ್ಳ ಸಾಗಣಿಕೆ ಸಹ ಮಾಡುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈತನಿಂದ 0.945 ಕೆಜಿ ಚಿನ್ನವನ್ನ ಜಪ್ತಿ ಮಾಡಲಾಗಿದೆ.ಅದೇ ರೀತಿ, ಮತ್ತೊಬ್ಬ ಭಾರತೀಯ ಪ್ರಯಾಣಿಕ ಕುವೈತ್ ನಿಂದ ಜಝೀರಾ ಏರ್‌ ಲೈನ್ಸ್ ನಲ್ಲಿ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ತಪಾಸಣೆ ನಡೆಸಿದ ಕಸ್ಟಮ್ಸ್ ಅಧಿಕಾರಿಗಳು ಆರೋಪಿಯಿಂದ 689.95 ಗ್ರಾಂ ಚಿನ್ನವನ್ನ ಜಪ್ತಿ ಮಾಡಿದ್ದಾರೆ.

ಶ್ರೀಲಂಕಾ ಪ್ರಯಾಣಿಕನೊಬ್ಬ ಶ್ರೀಲಂಕಾ ಏರ್‌ ಲೈನ್ಸ್ ಮೂಲಕ ಕೆಐಎಎಲ್‍ಗೆ ಬಂದಿಳಿದಿದ್ದು, ಆತನನ್ನು ತಪಾಸಣೆ ನಡೆಸಿದ್ದಾಗ ಆತ ತನ್ನ ಒಳ ಉಡುಪಿನಲ್ಲಿ 103.33 ಗ್ರಾಂ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿರುವುದು ಗೊತ್ತಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News