ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಗೆ ಸಿಂಡಿಕೇಟ್ ಸದಸ್ಯರ ನೇಮಕ

Update: 2024-08-28 12:46 GMT

ಬೆಂಗಳೂರು ವಿಶ್ವವಿದ್ಯಾಲಯ

ಬೆಂಗಳೂರು : ಸಾಹಿತಿ ಕೆ.ಷರೀಫಾ, ಡಾ.ಬಂಜಗೆರೆ ಜಯಪ್ರಕಾಶ್, ಪ್ರೊ. ಅಮರೇಶ ನುಗಡೋಣಿ, ಡಾ.ನಟರಾಜ್ ಹುಳಿಯಾರ್, ಆಯೆಷಾ ಫರ್ಝನಾ ಸೇರಿದಂತೆ ಹಲವರನ್ನು ವಿವಿಧ ವಿಶ್ವವಿದ್ಯಾಲಯಗಳ ಸಿಂಡಿಕೇಟ್‍ಗೆ ಸದಸ್ಯರನ್ನು ನಾಮನಿರ್ದೇಶನ ಮಾಡಿ, ರಾಜ್ಯ ಸರಕಾರವು ಅಧಿಸೂಚನೆ ಹೊರಡಿಸಿದೆ.

ಕನ್ನಡ ವಿಶ್ವವಿದ್ಯಾಲಯ, ಜಾನಪದ ವಿವಿ, ಬೆಂಗಳೂರು, ಬೆಂಗಳೂರು ನಗರ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ, ಕುವೆಂಪು ವಿಶ್ವವಿದ್ಯಾಲಯ, ಗುಲ್ಬರ್ಗಾ ವಿಶ್ವವಿದ್ಯಾಲಯ, ರಾಯಚೂರು ವಿಶ್ವವಿದ್ಯಾಲಯ, ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯಗಳ ಸಿಂಡಿಕೇಟ್‍ಗೆ ಸದಸ್ಯರನ್ನು ಮೂರು ವರ್ಷಗಳ ಅವಧಿಗೆ ನಾಮನಿರ್ದೇಶನ ಮಾಡಲಾಗಿದೆ.

ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್‍ಗೆ ನಾಮನಿರ್ದೇಶಿತ ಸದಸ್ಯರಾಗಿ ಡಾ. ಬಿ.ಯು. ಸುಮ, ಸೋಮಶೇಖರ ಬಣ್ಣದ ಮನೆ, ಡಾ. ಎಸ್.ಎಂ. ಮುತ್ತಯ್ಯ, ಎನ್.ಎ. ಮುಹಮ್ಮದ್ ಇಸಾಯಿಲ್, ಡಾ. ಬಂಜಗೆರೆ ಜಯಪ್ರಕಾಶ್, ಡಾ. ಪಣಿರಾಜ್, ಡಾ. ನಟರಾಜ್ ಹುಳಿಯಾರ್, ಬಿ.ಆರ್.ಪಾಟೀಲ್ ಅವರನ್ನು ನೇಮಕ ಮಾಡಲಾಗಿದೆ.

ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್‍ಗೆ ಡಾ.ಜಯಶ್ರೀ ಹೆಗಡೆ, ಎಂ.ಎ. ಮಹದೇವ ನಾಯ್ಕ, ಡಾ. ಕೆ.ಷರೀಫಾ, ಡಿ.ವಿ. ಗಂಗರಾಜು, ದಂಡಕೆರೆ ನಾಗರಾಜ್, ರಮೇಶ್ ಬಾಬು ಅವರನ್ನು ನಾಮನಿರ್ದೇಶನ ಸದಸ್ಯರಾಗಿ ನೇಮಕ ಮಾಡಲಾಗಿದೆ.

ಬೆಂಗಳೂರು ನಗರ ವಿಶ್ವವಿದ್ಯಾಲಯದ ಸಿಂಡಿಕೇಟ್‍ಗೆ ಆಯೇಷ, ಫರ್ಝಾನಾ, ಡಾ. ಎಚ್.ಕೃಷ್ಣರಾಮ್, ಡಾ. ಫ್ರಾನ್ಸಿಸ್ ಅಲ್ಮೀಡಿಯಾ, ವಿ. ಶಿವಕುಮಾರ್, ಕೆ.ಪಿ. ಪಾಟೀಲ್, ಡಾ. ಬೀರಪ್ಪ ಎಚ್ ಅವರನ್ನು ಹಾಗೂ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸಿಂಡಿಕೇಟ್‍ಗೆ ಸಹನಾ ಎಸ್.ಆರ್, ಜೈದೀಪ್, ಅರ್ಬಾಜ್ ಪಾಷಾ, ಎಂ. ಗೋಪಾಲಗೌಡ, ನಿರೂಪ್, ಕೆ.ಬಸವರಾಜ್ ಅವರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಕ ಮಾಡಿ ಆದೇಶಿಸಲಾಗಿದೆ.

ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್‍ಗೆ ಪ್ರೊ. ಸಾಕಮ್ಮ ಬಿ., ಶಿವಕುಮಾರ್ ಎಂ., ಮುಸಾವಿರ್ ಬಾಷಾ ಎಂ., ಲಕ್ಷ್ಮೀಕಾಂತ ಚಿಮನೂರು, ಕೆ.ಪಿ.ಶ್ರೀಪಾಲ್, ಎಚ್.ಜಿ. ಅರವಿಂದ ಅವರನ್ನು ಹಾಗೂ ಗುಲ್ಬರ್ಗ ವಿಶ್ವವಿದ್ಯಾಲಯದ ಸಿಂಡಿಕೇಟ್‍ಗೆ ಡಾ. ಶ್ರೀದೇವಿ ಎಸ್ ಕಟ್ಟಿಮನಿ, ಸಿದ್ದಪ್ಪ ಸುಳ್ಳದ್, ಡಾ. ಪೀರ್‌ ಜಾದ ಪಹೀಮುದ್ದೀನ್, ಮಲ್ಲಣ್ಣ.ಎಸ್ ಮಡಿವಾಳ, ಉದಯ್ ಕಾಂತ್, ಸಿದ್ದಪ್ಪ ಮೂಲಗೆ ಅವರನ್ನು ನಾಮನಿರ್ದೇಶನ ಮಾಡಲಾಗಿದೆ.

ರಾಯಚೂರು ವಿಶ್ವವಿದ್ಯಾಲಯದ ಸಿಂಡಿಕೇಟ್‍ಗೆ ಡಾ.ಮೀನಾಕ್ಷಿ ಖಂಡಿಮಠ, ಡಿ.ಆರ್. ಚಿನ್ನ, ಜೀಶಾನ್ ಆಖಿಲ್ ಸಿದ್ದಿಖಿ, ಶಿವಣ್ಣ, ಚನ್ನಬಸವ, ಕೆ. ಪ್ರತಿಮಾ ಅವರನ್ನು ನಾಮನಿರ್ದೇಶನ ಮಾಡಲಾಗಿದೆ.

ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಿಂಡಿಕೇಟ್‍ಗೆ ಜಯಲಕ್ಷ್ಮೀ ನಾಯಕ್, ಡಾ. ವೈ.ಆರ್ತೋಬ ನಾಯ್ಕ, ಬಿ. ಪೀರ್ ಬಾಷಾ, ಶಿವಕುಮಾರ್‌ ಕೆ, ಡಾ. ಅಮರೇಶ ನಿಗಡೋಣಿ ಹಾಗೂ ಚ.ಹ.ರಘುನಾಥ್ ಅವರನ್ನು ನಾಮನಿರ್ದೇಶನ ಮಾಡಿ ಆದೇಶಿಸಿದೆ.

ಜಾನಪದ ವಿಶ್ವವಿದ್ಯಾಲಯದ ಸಿಂಡಿಕೇಟ್‍ಗೆ ಡಾ.ಜ್ಯೋತಿಲಕ್ಷ್ಮೀ ಡಿ.ಪಿ., ರಾಮಪ್ಪ ಮಾನಪ್ಪ ಲಂಬಾಣಿ, ಸಹನಾ ಪಿಂಜಾರ, ಮೋಹನ್ ಕುಮಾರ್ ಎನ್., ಗೋರೆವಾಲೆ ಚಂದ್ರಶೇಖರ್, ಡಾ.ಮೊಗುಳಿ ಗಣೇಶ್ ಅವರನ್ನು ಹಾಗೂ ಸಂಸ್ಕೃತ ವಿಶ್ವವಿದ್ಯಾಲಯದ ಸಿಂಡಿಕೇಟ್‍ಗೆ ಡಾ. ಬಂಗಾರಮ್ಮ ಕೆ, ಡಾ. ಶಿವಲಿಂಗಯ್ಯ, ಡಾ. ಮುನೀರ್ ಅಹಮದ್, ಬಸಪ್ಪ ಡೊಂಕಬಳ್ಳಿ, ಹನುಮಂತನಾಥ ಹಾಗೂ ನಾರಾಯಣ ಯಾಜಿ ಅವರನ್ನು ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಲಾಗಿದೆ.

Delete Edit
Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News