ಹಾಸನ ಲೋಕಸಭಾ ಕ್ಷೇತ್ರದಿಂದ BJP ಅಭ್ಯರ್ಥಿ ಸ್ಪರ್ಧೆ; ಜೆಡಿಎಸ್ ಬೆಂಬಲ: ಮಾಜಿ ಶಾಸಕ ಪ್ರೀತಂ ಗೌಡ

Update: 2023-10-05 19:59 IST
ಹಾಸನ ಲೋಕಸಭಾ ಕ್ಷೇತ್ರದಿಂದ BJP ಅಭ್ಯರ್ಥಿ ಸ್ಪರ್ಧೆ; ಜೆಡಿಎಸ್ ಬೆಂಬಲ: ಮಾಜಿ ಶಾಸಕ ಪ್ರೀತಂ ಗೌಡ
  • whatsapp icon

ಹಾಸನ: 'ಮುಂದಿನ ಲೋಕಸಭೆ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಸ್ಪರ್ಧೆ ಮಾಡಲಿದ್ದು, ಜೆಡಿಎಸ್ ಸಹಕಾರ ಕೊಡಲಿದೆ' ಎಂದು ಮಾಜಿ ಶಾಸಕ ಪ್ರೀತಂ ಗೌಡ ಹೇಳಿದ್ದಾರೆ. 

ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ʼʼಬಿಜೆಪಿ-ಜೆಡಿಎಸ್ ಮೈತ್ರಿ ಒಂದು ದೀರ್ಘಾವದಿಯ ಒಪ್ಪಂದ ಎಂದು ಜೆಡಿಎಸ್‌ ನವರೇ ಹೇಳಿರುವುದರಿಂದ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡಿ ಪ್ರಚಾರ ಮಾಡುವ ಅನಿವಾರ್ಯತೆ ಅವರಿಗಿರುತ್ತದೆ, ಅದನ್ನವರು ಮಾಡಬೇಕು ಅಷ್ಟೇʼʼ ಎಂದು ಹೇಳಿದರು.

ʼʼನಾವು ಜೆಡಿಎಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿಲ್ಲ. ಜೆಡಿಎಸ್ ನವರು ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿರೋದುʼʼ ಎಂದು ಪ್ರೀತಂ ಗೌಡ ಹೇಳಿದರು.  

‘303 ಸೀಟು ಗೆದ್ದಿರುವ ಬಿಜೆಪಿಯೊಂದಿಗೆ 1 ಸೀಟ್ ಗೆದ್ದಿರುವ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು ಇನ್ನೂ ಮೂರು ನಾಲ್ಕು ತಿಂಗಳು ಆ ಪಕ್ಷದ ತತ್ವ ಸಿದ್ಧಾಂತ ಆಚಾರ ವಿಚಾರಗಳನ್ನು ಜೆಡಿಎಸ್ ತಿಳಿಯಬೇಕಿದೆ. ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡು ನೆಂಟರಾಗಿ ಬಂದಿದ್ದು, ಇದು ಬಿಜೆಪಿ ಮನೆ, ಅವರು ಅತಿಥಿ ಮಾತ್ರ. ಅವರಿಗೆ ಅತಿಥಿ ಸತ್ಕಾರ ಮಾಡುವುದು ನಮ್ಮ ಕರ್ತವ್ಯ ಅದನ್ನೇ ಮಾಡುತ್ತಿದ್ದೇವೆ’ ಎಂದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News