ಕಾಂಗ್ರೆಸ್‌ ಔತಣಕೂಟದಲ್ಲಿ ಬಿಜೆಪಿಯ ಸೋಮಶೇಖರ್, ಶಿವರಾಂ ಹೆಬ್ಬಾರ್ ಭಾಗಿ; ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟನೆ

Update: 2023-12-14 15:42 IST
ಕಾಂಗ್ರೆಸ್‌ ಔತಣಕೂಟದಲ್ಲಿ ಬಿಜೆಪಿಯ ಸೋಮಶೇಖರ್, ಶಿವರಾಂ ಹೆಬ್ಬಾರ್ ಭಾಗಿ; ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟನೆ
  • whatsapp icon

ಬೆಳಗಾವಿ, ಡಿ. 14:" ಬಿಜೆಪಿ ಶಾಸಕರಾದ ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಅವರು ನಿನ್ನೆ ರಾತ್ರಿ ನಾವು ಆಹ್ವಾನ ನೀಡಿದ್ದ ಭೋಜನಕೂಟಕ್ಕೆ ಬಂದಿದ್ದರು" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.

ಗುರುವಾರ ಸುವರ್ಣಸೌಧದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು,ಬಿಜೆಪಿ ಶಾಸಕರಾದ ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಅವರು ಕಾಂಗ್ರೆಸ್ ಪಕ್ಷದ ಸಭೆಗೆ ಬಂದಿಲ್ಲ. ವಿಶ್ವನಾಥ್ ಅವರ ಸಹಿತ ಅನ್ಯ ಪಕ್ಷದ 10 ಶಾಸಕರು ಉಪಹಾರ ಕೂಟಕ್ಕೆ ಬಂದಿದ್ದರು" ಎಂದರು.

ಅನ್ಯ ಪಕ್ಷದ ಶಾಸಕರು ಸಿಎಲ್ ಪಿ ಸಭೆಗೆ ಬಂದಿದ್ದರೇ ಎಂಬ ಪ್ರಶ್ನೆಗೆ ಉತ್ತರಿಸಿದ  “ಅವರು ಏಕೆ ನಮ್ಮ ಶಾಸಕಾಂಗ ಸಭೆಗೆ ಬರುತ್ತಾರೆ. ಅವರು ನಮ್ಮ ಪಕ್ಷದ ಶಾಸಕರಲ್ಲ. ಹೀಗಾಗಿ ಅವರು ನಮ್ಮ ಶಾಸಕಾಂಗ ಸಭೆಗೆ ಬಂದಿಲ್ಲ” ಎಂದು ಸ್ಪಷ್ಟಪಡಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ  ವಿಪಕ್ಷ ನಾಯಕ ಆರ್.ಅಶೋಕ್, ಆಹ್ವಾನದ ಮೇರೆಗೆ ಔತಣ ಕೂಟಕ್ಕೆ ಹೋಗಿದ್ದೆವು ಎಂದು ಎಸ್.ಟಿ.ಸೋಮಶೇಖರ್ ನನ್ನ ಬಳಿ ಹೇಳಿದ್ದಾರೆ. ಆ ದೃಷ್ಟಿಯಿಂದ ಅವರು ಯಾವುದೇ ರೀತಿಯ ಶಿಸ್ತು ಉಲ್ಲಂಘನೆ ಮಾಡಿಲ್ಲ.ನಾನು ಕೂಡ ಈಗಾಗಲೇ ಅವರ ಬಳಿ ಮಾತನಾಡಿದ್ದೇನೆ. ನಿನ್ನೆ ಬಿಜೆಪಿ ಧರಣಿಯಲ್ಲೂ ಅವರು ಭಾಗವಹಿಸಿದ್ದರು. ಆದರೂ ನಾನು ಅವರನ್ನು ಕರೆದು ಮಾತನಾಡುತ್ತೇನೆ. ನಮ್ಮ ಸಭೆಗೆ ಬಂದಿದ್ದರು, ನನ್ನ ಕೊಠಡಿಗೂ ಬಂದು ಮಾತನಾಡಿದ್ದಾರೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News