ಹಾವೇರಿಗೆ ಬಂದು ಈಶ್ವರಪ್ಪ ಮಾಡ್ತಿರೋದು ಮಕ್ಕಳಾಟ: ಬಿ.ಸಿ ಪಾಟೀಲ್‌ ಆಕ್ರೋಶ

Update: 2023-08-22 17:17 GMT

ಹಾವೇರಿ: ಮಾಜಿ ಸಚಿವ ಕೆಎಸ್ ಈಶ್ವರಪ್ಪ ತಮ್ಮ ಮಗನನ್ನು ಹಾವೇರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಬಿಂಬಿಸಲು ಹೊರಟಿರುವುದು ಮಕ್ಕಳಾಟ ಎಂದು ಮಾಜಿ ಸಚಿವ ಬಿಸಿ ಪಾಟೀಲ್‌ ಕಿಡಿಕಾರಿದ್ದಾರೆ.

ಹಾವೇರಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ''ಈಶ್ವರಪ್ಪನವರು ಇಲ್ಲಿಯೂ ಮಗನನ್ನು ಬಿಟ್ಟು ವಾತಾವರಣ ಕೆಡಿಸ್ತಾ ಇದ್ದಾರೆ. ಚುನಾವಣೆಯಲ್ಲಿ ವಿರೋಧ ಮಾಡಿದವರನ್ನ ಕರಕೊಂಡು ಕ್ಷೇತ್ರದಲ್ಲಿ ಓಡಾಡ್ತಾ ಇದ್ದಾರೆ. ಈಶ್ವರಪ್ಪನವರು ವಲಸೆ ಬಂದ ನಮ್ಮ ಬಗ್ಗೆ ಈ ಹಿಂದೆ ಮಾತಾಡಿದ್ದಾರೆ, ಮತ್ತೆ ಫೋನ್ ಮಾಡಿದಾಗ ನಾನು ಹೇಳಿಲ್ಲಾ ಕ್ಷಮಿಸಿ ಅಂತಾರೆ. ಹಿರಿಯ ನಾಯಕರಾಗಿ ಈ ಥರ ಮಕ್ಕಳಾಟದವರ ಥರ ಮಾತಾಡಿದ್ರೆ ಹೇಗೆ?ʼʼ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ʼʼವಲಸಿಗರು ಎಂದು ಲಘುವಾಗಿ ಮಾತನಾಡುವ ಈಶ್ವರಪ್ಪ ಅವರು ಈಗ ನನ್ನ ಕ್ಷೇತ್ರದಲ್ಲಿ ಓಡಾಡುತ್ತಿರುವುದು ಜತೆಗೆ ಪಕ್ಷದ ಸೋಲಿಗೆ ಕಾರಣರಾದವರನ್ನು ಕರೆದುಕೊಂಡು ಒಂದರ್ಥದಲ್ಲಿ ಪ್ರಚಾರ ನಡೆಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ?ʼʼ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಮಗನಿಗಾಗಿ ಓಡಾಡೋದು ಯಾಕೆ?

ʼʼಹಿರಿಯ ನಾಯಕರು ಒಡಕು ಇರುವ ಜಾಗದಲ್ಲಿ ನೀರು ಎರೆಯಬಾರದು.  ಪಕ್ಷ ಹೇಳಿದಾಗ ಕ್ಷೇತ್ರಕ್ಕೆ ಹೋಗೋದು ಅರ್ಥ ಇದೆ. ಯಾರು ಹೇಳದೆ ಓಡಾಡಿದ್ರೆ ತಪ್ಪು ಅರ್ಥ ಆಗುತ್ತದೆ.  ಪ್ರಧಾನಿ ಮೋದಿಯವರ ಹೆಸರಿನ ಮೇಲೆ ಎಂಪಿ ಚುನಾವಣೆ ನಡಿಯೋದು. ಇಲ್ಲಿ ಯಾರ ಮೇಲೂ ನಡೆಯೊಲ್ಲʼʼ ಎಂದು ಹೇಳಿದರು. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News