ಹುಬ್ಬಳ್ಳಿ | ನರ್ಸ್‌ಗಳ ಬಗ್ಗೆ ಅವಹೇಳನಕಾರಿ ರೀಲ್ಸ್: 11 ವೈದ್ಯಕೀಯ ವಿದ್ಯಾರ್ಥಿಗಳ ಅಮಾನತು
Update: 2023-08-08 16:35 GMT
ಹುಬ್ಬಳ್ಳಿ: ನರ್ಸ್ ಗಳ ಬಗ್ಗೆ ಅವಹೇಳನಕಾರಿಯಾಗಿ ರೀಲ್ಸ್ ಗಳನ್ನು ಮಾಡಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಆರೋಪದಲ್ಲಿ ಹನ್ನೊಂದು ವೈದ್ಯಕೀಯ ವಿದ್ಯಾರ್ಥಿಗಳನ್ನು ಇಲ್ಲಿನ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ಅಮಾನತುಗೊಳಿಸಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ತೀವ್ರ ಟೀಕೆಗೆ ಗುರಿಯಾದ ನಂತರ, ಅಮಾನತುಗೊಂಡ ವಿದ್ಯಾರ್ಥಿಗಳು ಮತ್ತೊಂದು ವೀಡಿಯೊ ಮಾಡಿ ನರ್ಸ್‌ಗಳನ್ನು ಕ್ಷಮೆಯಾಚಿಸಿದ್ದಲ್ಲದೆ, ಇದನ್ನು ತಮಾಷೆಗಾಗಿ ಮಾಡಿದ್ದಾಗಿ ಸ್ಪಷ್ಟಪಡಿಸಿದ್ದರು.
ನರ್ಸ್ ಗಳ ಪ್ರತಿಭಟನೆ
ಕಿಮ್ಸ್ ನ ಆಡಳಿತ ಕಚೇರಿ ಎದುರು ಸೋಮವಾರ ದಿಢೀರನೆ ಪ್ರತಿಭಟನೆ ನಡೆಸಿದ ನರ್ಸ್ ಗಳು ರೀಲ್ಸ್ ಮಾಡಿದ್ದ ಆರೋಪಿ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಹೀಗಾಗಿ ಹನ್ನೊಂದು ವೈದ್ಯಕೀಯ ವಿದ್ಯಾರ್ಥಿಗಳನ್ನು ಕಿಮ್ಸ್ ನ ನಿರ್ದೇಶಕರು ಅಮಾನತುಗೊಳಿಸಿದ್ದಾರೆ.