ಮಡಿಕೇರಿ: SSF ನಿಂದ ಸಿಟಿ ಟಾಕ್ ಕಾರ್ಯಕ್ರಮ

Update: 2023-07-20 05:43 GMT

ಮಡಿಕೇರಿ: 1973 ರಲ್ಲಿ ಕೇರಳದ ಮಲಪ್ಪುರಂನಲ್ಲಿ ಪ್ರಾರಂಭಗೊಂಡ SSF 50-ನೇ ವರ್ಷಕ್ಕೆ ತಲುಪುವಾಗ 'ನಾವು ಭಾರತೀಯರು' ಎಂಬ ಧ್ಯೇಯ ವಾಕ್ಯದೊಂದಿಗೆ ನವೆಂಬರ್ 24,25,26ರಂದು ಮುಂಬೈ ಏಕತಾ ಉದ್ಯಾನ ಮೈದಾನದಲ್ಲಿ ಗೋಲ್ಡನ್ ಫಿಫ್ಟಿ ರಾಷ್ಟ್ರೀಯ ಐತಿಹಾಸಿಕ ಮಹಾ ಸಮ್ಮೇಳನ ನಡೆಯಲಿದೆ. ಅದರ ಭಾಗವಾಗಿ ಎಲ್ಲಾ ರಾಜ್ಯಗಳಲ್ಲೂ ಗೋಲ್ಡನ್ ಫಿಫ್ಟಿ ಸಮ್ಮೇಳನ ನಡೆಯಲಿದ್ದು ಕರ್ನಾಟಕ ರಾಜ್ಯ ಗೋಲ್ಡನ್ ಫಿಫ್ಟಿ ಸಮ್ಮೇಳನವು ಸೆಪ್ಟೆಂಬರ್ 10ರಂದು ಬೆಂಗಳೂರು ಪ್ಯಾಲೆಸ್ ಮೈದಾನದಲ್ಲಿ ನಡೆಯಲಿದ್ದು, ಇದರ ಪ್ರಚಾರಾರ್ಥ ಪ್ರತಿ ಜಿಲ್ಲೆಗಳಲ್ಲೂ ನಡೆಸುವ ಸಿಟಿ ಟಾಕ್ ಕಾರ್ಯಕ್ರಮದ ಕೊಡಗು ಜಿಲ್ಲಾ ಕಾರ್ಯಕ್ರಮವು ಮಡಿಕೇರಿ ದೋಹಾ ಕಿಂಗ್ ಹೋಟೆಲಿನಲ್ಲಿ ನಡೆಯಿತು.

SYS ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಹಮದ್ ಮದನಿ ಉಸ್ತಾದರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮವು SSF ರಾಷ್ಟ್ರೀಯ ಕಾರ್ಯದರ್ಶಿ ಯಾಕೂಬ್ ಮಾಷ್ಟರ್ ಉದ್ಘಾಟಿಸಿದರು.  SYSರಾಜ್ಯ ಕಾರ್ಯದರ್ಶಿಯೂ SSF ಮಾಜಿ ಪ್ರಧಾನ ಕಾರ್ಯದರ್ಶಿಯೂ ಆದ ಮೌಲಾನಾ ಕೆ.ಎಂ ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ ವಿಷಯ ಮಂಡನೆ ಮಾಡಿದರು. 

ಕೊಡಗು ಜಿಲ್ಲಾ ಪತ್ರಕರ್ತ ಸಂಘದ ಅಧ್ಯಕ್ಷರಾದ ರಮೇಶ್ ಕುಟ್ಟಪ್ಪ ಕರ್ನಾಟಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಪವನ್ ಪೆಮ್ಮಯ್ಯ ಕೆಪಿಸಿಸಿ ಸದಸ್ಯರಾದ ಮುನಿರ್ ಕರ್ನಾಟಕ ಮುಸ್ಲಿಂ ಜಮಾಅತ್ ಕೊಡಗು ಜಿಲ್ಲಾ ಕಾನೂನು ಸಲಹೆಗಾರರಾದ ಅಡ್ವೋಕೇಟ್ ಕುಂಞ್ಞಿಅಬ್ದುಲ್ಲಾ ಮಡಿಕೇರಿ ಕೊಡಗು ಜಿಲ್ಲಾ ವಕ್ಫ್ ಉಪಾಧ್ಯಕ್ಷರಾದ ಶಾಫಿ ಸಅದಿ ಸೋಮವಾರಪೇಟೆ ಕಾರ್ಯಕ್ರಮಕ್ಕೆ ಶುಭಹಾರೈಸಿದರು

ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷರಾದ ಝುಬೈರ್ ಸಅದಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ SYS ಜಿಲ್ಲಾಧ್ಯಕ್ಷರಾದ ಹಮೀದ್ ಮುಸ್ಲಿಯಾರ್ SYS ಜಿಲ್ಲಾ ಕಾರ್ಯದರ್ಶಿಗಳಾದ ಅಝೀಝ್ ಮುಸ್ಲಿಯಾರ್ ,ಅಝೀಝ್ ಸಖಾಫಿ,ಕರ್ನಾಟಕ ಹಿತರಕ್ಷಣಾ ವೇದಿಕೆಯ ಸಲಹೆಗಾರ ಸುಲೈಮಾನ್ ಕೊಡಗು ಜಿಲ್ಲಾ ವಕ್ಫ್ ಉಪಾಧ್ಯಕ್ಷರಾದ ಝೈನುಲ್ ಆಬಿದ್ ಮಡಿಕೇರಿ, ಖಾದರ್ ಪಾಷಾ ಉಪಸ್ಥಿತರಿದ್ದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜುನೈದ್ ಅಮ್ಮತ್ತಿ ಸ್ವಾಗತಿಸಿ ಕ್ಯಾಂಪಸ್ ಕಾರ್ಯದರ್ಶಿ ಇಬ್ರಾಹಿಂ ಮಾಸ್ಟರ್ ವಂದಿಸಿದರು. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News