ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣ | ಆರೋಪ ನಿಗದಿ ಮಾಡದಂತೆ ಹೈಕೋರ್ಟ್ ಆದೇಶ

Update: 2025-01-09 10:16 GMT

 ಪ್ರಜ್ವಲ್ ರೇವಣ್ಣ

ಬೆಂಗಳೂರು : ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಎರಡನೇ ಅತ್ಯಾಚಾರ ಪ್ರಕರಣದಲ್ಲಿ ಆರೋಪ ನಿಗದಿ ಮಾಡದಂತೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.

ಚಾರ್ಚ್ ಶೀಟ್ ಪ್ರಶ್ನಿಸಿ ಪ್ರಜ್ವಲ್ ರೇವಣ್ಣ‌ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ನ ನ್ಯಾಯಮೂರ್ತಿ.ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿ ಜ.16 ರವರೆಗೆ ಪ್ರಜ್ವಲ್ ರೇವಣ್ಣ ವಿರುದ್ಧ ಆರೋಪ ನಿಗದಿಪಡಿಸುವಂತಿಲ್ಲ ಎಂದು ಮಧ್ಯಂತರ ಆದೇಶ ನೀಡಿದೆ.

ಕ್ರೈಮ್ ನಂಬರ್ 2/2024 ರಲ್ಲಿ ಆರೋಪ ನಿಗದಿಪಡಿಸದಂತೆ ಹೈಕೋರ್ಟ್ ಆದೇಶಿದೆ. ಆದರೆ ಆರೋಪ‌ ನಿಗದಿ ಮುಂಚಿನ ವಿಚಾರಣೆ ಮುಂದುವರಿಸಬಹುದು ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಆದೇಶಿದೆ.

ಪ್ರಜ್ವಲ್ ಮೊಬೈಲ್‌ನಿಂದ ಸಂಗ್ರಹಿಸಿದ ಫೋಟೋ ಮಾಹಿತಿ ಹಂಚಿಕೊಂಡಿಲ್ಲ. ಪ್ರಕರಣದ ವಿಚಾರಣೆಗೆ ಇದು ಅತ್ಯಗತ್ಯವೆಂದು ಅರ್ಜಿ ಸಲ್ಲಿಸಿದ್ದು, ದಾಖಲೆ ನೀಡದಿರುವುದು ಸುಪ್ರೀಂ ಕೋರ್ಟ್ ನ ಆದೇಶಕ್ಕೆ ವಿರುದ್ಧವೆಂದು ಪ್ರಜ್ವಲ್ ರೇವಣ್ಣ ಪರ ವಕೀಲ ಅರುಣ್ ವಾದ ಮಂಡಿಸಿದರು. ವಾದ ಆಲಿಸಿದ ಪೀಠ ವಿಚಾರಣೆ ಜ.16ಕ್ಕೆ ಮುಂದೂಡಿದೆ.

ಜ.13ಕ್ಕೆ ವಿಚಾರಣಾಧೀನ ಕೋರ್ಟ್‌ನಲ್ಲಿ ಆರೋಪ ನಿಗದಿಗೆ ನಿಗದಿಯಾಗಿತ್ತು. ಸದ್ಯ ಹೈಕೋರ್ಟ್ ಆದೇಶದಿಂದ ಪ್ರಜ್ವಲ್‌ಗೆ ರಿಲೀಫ್‌ ಸಿಕ್ಕಿದೆ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News