ಕರ್ನಾಟಕದ ಹುಲಿ ಸಂರಕ್ಷಿತಾರಣ್ಯಗಳಲ್ಲಿ ವನ್ಯಜೀವಿ ಅಪರಾಧ ತಡೆಗೆ ಶ್ವಾನಪಡೆ ನಿಯೋಜನೆ!

Update: 2024-12-04 13:39 GMT

Photo : Special Arrangement

ಬಂಡೀಪುರ: ಕರ್ನಾಟಕದ ಹುಲಿ ಸಂರಕ್ಷಿತಾರಣ್ಯಗಳಲ್ಲಿ ವನ್ಯಜೀವಿ ಅಪರಾಧ ತಡೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಡಾಗ್ ಸ್ಕ್ವಾಡ್ ಸೆಂಟರ್ ಉದ್ಘಾಟನೆಗೊಂಡಿದೆ

ಮೇಲುಕಾಮನಹಳ್ಳಿ ಆಡಳಿತಾತ್ಮಕ ವಿಭಾಗ ಪ್ರದೇಶದಲ್ಲಿ ಈ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಈ ಕೇಂದ್ರದಲ್ಲಿ ಒಟ್ಟು 12 ಶ್ವಾನಗಳಿವೆ. ಇಲ್ಲಿ ಶ್ವಾನಗಳ ಆಹಾರ, ಔಷಧಗಳು ಹಾಗೂ ಇನ್ನಿತರ ವಸ್ತುಗಳನ್ನು ಸಂಗ್ರಹಿಸಿಡಲು ಒಂದು ಗೋದಾಮನ್ನೂ ನಿರ್ಮಿಸಲಾಗಿದೆ.

ಈ ಕೇಂದ್ರವನ್ನು ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಎಂ.ಮಾಲತಿಪ್ರಿಯ ಹಾಗೂ ಹುಲಿ ಯೋಜನೆ ಅರಣ್ಯ ಸಂರಕ್ಷಣಾಧಿಕಾರಿ ಪಿ.ರಮೇಶ್ ಕುಮಾರ್ ಉದ್ಘಾಟಿಸಿದರು.

ಕರ್ನಾಟಕದ ಪ್ರತಿ ಹುಲಿ ಸಂರಕ್ಷಿತಾರಣ್ಯಗಳಿಗೆ ತಲಾ ಎರಡು ಬೆಲ್ಜಿಯನ್ ಮೆಲೆನೋಯಿಸ್ ತಳಿಯ ನಾಯಿ ಮರಿಗಳಿರಲಿದ್ದು, ಪ್ರತಿ ನಾಯಿ ಮರಿಗೆ ಇಬ್ಬರು ಸಿಬ್ಬಂದಿಗಳನ್ನು ಒದಗಿಸಲಾಗುತ್ತದೆ. ಈ ಎಲ್ಲ ನಾಯಿ ಮರಿಗಳು ಬಂಡೀಪುರದಲ್ಲಿ 10 ತಿಂಗಳ ಕಾಲ ತರಬೇತಿಗೆ ಒಳಗಾಗಲಿವೆ ಎಂದು ರಮೇಶ್ ಕುಮಾರ್ ತಿಳಿಸಿದರು.

ತರಬೇತಿಯ ನಂತರ ಈ ಶ್ವಾನಗಳನ್ನು ಸಂಬಂಧಿತ (ಬಂಡೀಪುರ, ನಾಗರಹೊಳೆ, ಭದ್ರಾ, ಬಿಆರ್ಟಿ ಹಾಗೂ ಕಾಳಿ ಹುಲಿ ಸಂರಕ್ಷಿತಾರಣ್ಯ) ಹುಲಿ ಸಂರಕ್ಷಿತಾರಣ್ಯಗಳಲ್ಲಿ ವನ್ಯಜೀವಿಗಳ ಕಳವು, ಅಕ್ರಮ ಮರಗಳ ಹನನ ಹಾಗೂ ವನ್ಯಜೀವಿ ಉತ್ಪನ್ನಗಳನ್ನು ವಶಪಡಿಸಿಕೊಳ್ಳುವಂತಹ ಅರಣ್ಯ ಮತ್ತು ವನ್ಯಜೀವಿ ಸಂಬಂಧಿತ ಅಪರಾಧಗಳನ್ನು ಪತ್ತೆ ಹಚ್ಚಲು ನಿಯೋಜಿಸಲಾಗುವುದು ಎಂದು ಅವರು ಹೇಳಿದರು.

ವನ್ಯಜೀವಿ ಶ್ವಾನಗಳು ಹಾಗೂ ವನ್ಯಜೀವಿ ಅಪರಾಧ ಪತ್ತೆ ಶ್ವಾನಗಳು ಅರಣ್ಯ ಅಪರಾಧಗಳನ್ನು ಪತ್ತೆ ಹಚ್ಚಲು ನೆರವು ನೀಡಲಿವೆ. ಇಡೀ ದೇಶದ ಯಾವುದೇ ಹುಲಿ ಸಂರಕ್ಷಿತಾರಣ್ಯಗಳಲ್ಲಿ ಅರಣ್ಯ ಇಲಾಖೆ ಕೈಗೆತ್ತಿಕೊಂಡಿರುವ ಪ್ರಪ್ರಥಮ ಯೋಜನೆ ಇದಾಗಿದ್ದು, ಇದರಿಂದ ರಾಜ್ಯದಲ್ಲಿ ಪತ್ತೆ ಶ್ವಾನ ಪಡೆಯನ್ನು ಅಭಿವೃದ್ಧಿ ಪಡಿಸಲು ನೆರವಾಗಲಿದೆ ಎಂದು ರಮೇಶ್ ಕುಮಾರ್ ತಿಳಿಸಿದರು.

ಸೌಜನ್ಯ : thehindu.com

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News