ಹಿರಿಯ ಐಪಿಎಸ್ ಅಧಿಕಾರಿ ರವಿ ಸಿನ್ಹಾ RAW ಮುಖ್ಯಸ್ಥರಾಗಿ ನೇಮಕ

Update: 2023-06-20 06:40 GMT

ಹೊಸದಿಲ್ಲಿ: ಹಿರಿಯ ಐಪಿಎಸ್ ಅಧಿಕಾರಿ ರವಿ ಸಿನ್ಹಾ ಅವರನ್ನು ಭಾರತದ ಬಾಹ್ಯ ಗುಪ್ತಚರ ಸಂಸ್ಥೆ RAW ನ ನೂತನ ಮುಖ್ಯಸ್ಥರನ್ನಾಗಿ ಸೋಮವಾರ ನೇಮಿಸಲಾಗಿದೆ ಎಂದು ಸಿಬ್ಬಂದಿ ಸಚಿವಾಲಯದ ಆದೇಶ ತಿಳಿಸಿದೆ.

ರವಿ ಸಿನ್ಹಾ, ಛತ್ತೀಸ್ಗಢ ಕೇಡರ್ನ 1988 ರ ಬ್ಯಾಚ್ ನ ಭಾರತೀಯ ಪೊಲೀಸ್ ಸೇವೆ (IPS) ಅಧಿಕಾರಿಯಾಗಿದ್ದು, ಪ್ರಸ್ತುತ ಕ್ಯಾಬಿನೆಟ್ ಸೆಕ್ರೆಟರಿಯಟ್ನ ವಿಶೇಷ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಎರಡು ವರ್ಷಗಳ ಅವಧಿಗೆ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ (ರಾ) ಕಾರ್ಯದರ್ಶಿಯಾಗಿ ರವಿ ಸಿನ್ಹಾ ಅವರನ್ನು ನೇಮಕ ಮಾಡಲು ಸಂಪುಟದ ನೇಮಕಾತಿ ಸಮಿತಿಯು ಅನುಮೋದನೆ ನೀಡಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ರವಿ ಸಿನ್ಹಾ ಅವರು ಜೂನ್ 30, 2023 ರಂದು ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿರುವ ಸಮಂತ್ ಕುಮಾರ್ ಗೋಯೆಲ್ ಅವರ ಸ್ಥಾನವನ್ನು ತುಂಬಲಿದ್ದಾರೆ.

Ravi SinhaRavi Sinha

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News