ಕಾರ್ಕಳ: ಡಿ. 27ರಿಂದ ಕಾರ್ಲೋತ್ಸವ; ಕಚೇರಿ ಉದ್ಘಾಟನೆ
ಕಾರ್ಕಳ: ಡಿ. 27, 28, 28ರಂದು ನಡೆಯಲಿರುವ ಬೃಹತ್ ಕಾರ್ಲೊತ್ಸವ ಕಾರ್ಯಕ್ರಮದ ಸ್ವಾಗತ ಕಚೇರಿ ಉದ್ಘಾಟನೆಯು ಇಂದು ಬೆಳಿಗ್ಗೆ ಕಾರ್ಕಳ ಸ್ವರಾಜ್ಯ ಮೈದಾನದಲ್ಲಿ ನಡೆಯಿತು.
ಕಚೇರಿಯನ್ನು ಸತ್ಯೇಂದ್ರ ಭಟ್ ಉದ್ಘಾಟನೆ ಮಾಡಿದರು. ಈ ಸಂದರ್ಭ ಸಮಾಜ ಸೇವಕ ಹಾಗು ಉದ್ಯಮಿ ಬೋಳ ಪ್ರಶಾಂತ್ ಕಾಮತ್, ಉದ್ಯಮಿ ಅಜಿತ್ ಕಾಮತ್, ಪ್ರಕಾಶ್ ಶೆಣೈ, ಪ್ರಕಾಶ್ ರಾವ್, ಸರ್ವೋತ್ತಮ ಕಡಂಬ, ಸುಭಾಷ್ಚಂದ್ರ ಹೆಗ್ಡೆ, ಪ್ರದೀಪ್ ಶೃಂಗಾರ್ ಮತ್ತಿತರರು ಭಾಗವಹಿಸಿದ್ದರು.
ಕಾರ್ಯಕ್ರಮದ ಬಗ್ಗೆ ಮಾತನಾಡಿದ ಪ್ರಕಾಶ್ ರಾವ್ ರವರು ಕಾರ್ಕಳದಲ್ಲಿ ನಡೆಯುವ ಕಾರ್ಲೊತ್ಸವಕ್ಕೆ ಜನ ಸಮೂಹವೇ ಬರಲಿದೆ ಎಂದರು. ನಮ್ಮೂರ ಹಿರಿಮೆಯನ್ನು ಎತ್ತಿ ಹಿಡಿಯುವಲ್ಲಿ ಎಲ್ಲರ ಪಾತ್ರ ಕೂಡ ಮಹತ್ತರ ಎಂದರು.
ಹರೀಶ್ ಮಧುರ ಮಾತನಾಡಿ ಡಿ.25 ರಿಂದಲೇ ಸ್ವರಾಜ್ಯ ಮೈದಾನದಲ್ಲಿ ಆಹಾರ ಮೇಳ, ವಸ್ತು ಪ್ರದರ್ಶನ, ಅಮ್ಯೂಸ್ ಮೆಂಟ್ ಪಾರ್ಕ್ ಆರಂಭ ಗೊಳ್ಳಲಿದ್ದು, ಡಿಸೆಂಬರ್ 30ರವರೆಗೂ ಮುಂದುವರಿಯಲಿದೆ ಎಂದು ಹೇಳಿದರು.
ಈ ಸಂದರ್ಭ ಕಾರ್ಲೊತ್ಸವದ ವಿವಿಧ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.