ಅಂದರ್ ಬಾಹರ್: 10 ಮಂದಿ ಬಂಧನ

Update: 2024-09-03 15:47 GMT

ಕೋಟ, ಸೆ.3: ಬೇಳೂರು ಗ್ರಾಮದ ಕಲ್ಮಂಡೆ ಎಂಬಲ್ಲಿ ಸೆ.2ರಂದು ಮಧ್ಯಾಹ್ನ ವೇಳೆ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ 10 ಮಂದಿ ಆರೋಪಿಗಳನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.

ಹಂಸ ಬ್ಯಾರಿ, ಮಧುಕರ, ಚೇತನ್, ಜಯ ಪ್ರಕಾಶ್, ಶ್ರೀರಾಜ್, ಮಂಜುನಾಥ, ಸುಬ್ಬಣ್ಣ, ಅಶೋಕ, ಬಿ.ನರಸಿಂಹ, ಸೂರ ಬಂಧಿತ ಆರೋಪಿಗಳು. ಇವರೆಲ್ಲ ಕಲ್ಮಂಡೆ ನಿವಾಸಿ ಪ್ರತಾಪ್ ಶೆಟ್ಟಿ ಎಂಬವರ ಮನೆಯ ಹಿಂಬದಿ ಶೆಡ್‌ನಲ್ಲಿ ಅಕ್ರಮವಾಗಿ ಇಸ್ಪೀಟ್ ಜುಗಾರಿ ಆಡುತ್ತಿದ್ದು, ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಹಾಗೂ 23,700 ರೂ., 10 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News