ಮಾರಕ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯ ಚಿಕಿತ್ಸೆಗಾಗಿ ದಾನಿಗಳಿಂದ ನೆರವಿಗೆ ಮನವಿ

Update: 2024-05-24 20:30 IST
ಮಾರಕ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯ ಚಿಕಿತ್ಸೆಗಾಗಿ ದಾನಿಗಳಿಂದ ನೆರವಿಗೆ ಮನವಿ
  • whatsapp icon

ಉಡುಪಿ: ಮಾರಕ ಕಾಯಿಲೆಯಿಂದ ಬಳಲುತ್ತಿರುವ ಕಟಪಾಡಿ ಸಮೀಪದ ಶಂಕರಪುರ ಸರಕಾರಿಗುಡ್ಡೆ ನಿವಾಸಿ ಹಸನಬ್ಬ ಟಿ.(60) ಚಿಕಿತ್ಸೆಗಾಗಿ ದಾನಿಗಳ ನೆರವನ್ನು ಕೋರಿದ್ದಾರೆ.

ಮೂವರು ಮಕ್ಕಳು ಮತ್ತು ಪತ್ನಿ ಜೊತೆ ವಾಸವಾಗಿರುವ ಇವರು, ಉಡುಪಿ ಜಾಮೀಯ ಮಸೀದಿಯಲ್ಲಿ ಸಿಬ್ಬಂದಿಯಾಗಿ ದುಡಿಯುತ್ತಿದ್ದಾರೆ. ಬಡ ಕುಟುಂಬಕ್ಕೆ ಆಧಾರಸ್ತಂಭವಾಗಿರುವ ಹಸನಬ್ಬ ಇದೀಗ ಮಾರಕ ಕಾಯಿಲೆಗೆ ತುತ್ತಾಗಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇವರ ಚಿಕಿತ್ಸೆಗೆ ಸುಮಾರು 5ಲಕ್ಷ ರೂ.ವರೆಗೆ ವೆಚ್ಚವಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆದುದರಿಂದ ಇವರಿಗೆ ನೆರವು ನೀಡಲು ಇಚ್ಛಿಸುವ ದಾನಿಗಳು ವಿಳಾಸ: ಸರಕಾರಿಗುಡ್ಡೆ ಹೌಸ್, ಮೂಡಬೆಟ್ಟು, ಶಂಕರಪುರ, ಕಾಪು ತಾಲೂಕು. ಮೊಬೈಲ್ ನಂಬರ್: 9739671942ಕ್ಕೆ ಸಂಪರ್ಕಿಸಬಹುದು. ಕೆನರಾ ಬ್ಯಾಂಕ್ ಶಂಕರಪುರ ಶಾಖೆ, ಖಾತೆ ಸಂಖ್ಯೆ: 0636103011989, ಐಎಫ್‌ಸಿ ಕೋಡ್- ಸಿಎನ್‌ಆರ್‌ಬಿ 0000636.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News