ಉಡುಪಿ ಜಿಲ್ಲೆಯ ಹೊಸ 80 ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿ: ಡಿಸಿ ಡಾ. ವಿದ್ಯಾ ಕುಮಾರಿ

Update: 2023-09-27 11:39 GMT

ಉಡುಪಿ, ಸೆ.27: ಉಡುಪಿ ಜಿಲ್ಲೆಯಲ್ಲಿ ಸದ್ಯ 35 ಪ್ರವಾಸಿ ತಾಣಗಳಿದ್ದು, ಇದೀಗ ಮತ್ತೆ ಹೊಸದಾಗಿ 80 ತಾಣಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಮುಂದೆ ಇವುಗಳನ್ನು ಉಡುಪಿ ಜಿಲ್ಲೆಯ ಪ್ರವಾಸಿ ಭೂಪಟದಲ್ಲಿ ಹಾಕಲಾಗುತ್ತದೆ. ಅಲ್ಲದೆ ಈ ಹೊಸ ಪ್ರದೇಶಗಳನ್ನು ಪರಿಸರಕ್ಕೆ ಪೂರಪಕವಾಗಿ ಸಮಗ್ರವಾಗಿ ಅಭಿವೃದ್ಧಿ ಮಾಡಲಾಗುವುದು. ಇದರಿಂದ ಉಡುಪಿ ಜಿಲ್ಲೆಯು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಗುತ್ತದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದ್ದಾರೆ.

ಉಡುಪಿ ಜಿಲ್ಲಾಡಳಿತ, ಪ್ರಾವಸೋದ್ಯಮ ಇಲಾಖೆ, ನಗರಸಭೆ ಹಾಗೂ ಕರಾವಳಿ ಪ್ರವಾಸೋದ್ಯಮ ಸಂಘಟನೆ ಉಡುಪಿ ಜಿಲ್ಲೆ ಇವುಗಳ ಸಹಯೋಗ ದೊಂದಿಗೆ ‘ಪ್ರವಾಸೋದ್ಯಮ ಮತ್ತು ಹಸಿರು ಹೂಡಿಕೆಗಳು’ ಎಂಬ ಸಂದೇಶ ದೊಂದಿಗೆ ಉಡುಪಿ ಪುರಭವನದಲ್ಲಿ ಆಯೋಜಿಸಲಾದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಒಂದೆಡೆ ಕರಾವಳಿ ತೀರಾ, ಇನ್ನೊಂದೆ ಪಶ್ಚಿಮಘಟ್ಟಗಳ ಶ್ರೇಣಿ ಹೊಂದಿರುವ ಉಡುಪಿ ಜಿಲ್ಲೆಯ ಪ್ರವಾಸೋದ್ಯಮವನ್ನು ಪರಿಸರಕ್ಕೆ ಪೂರಕವಾಗಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ. ಪ್ರವಾಸಕ್ಕೆ ಸಂಬಂಧಿಸಿ ಉದ್ಯಮ ಮಾಡುವ ಸಂದರ್ಭ ದಲ್ಲಿ ಸಮುದ್ರ ಅಥವಾ ಅರಣ್ಯಕ್ಕೆ ಹಾನಿಯಾದರೆ ಅದರ ಪರಿಣಾಮ ವನ್ನು ನಾವು ಎದುರಿಸಬೇಕಾಗುತ್ತದೆ. ಆದುದರಿಂದ ಅದನ್ನು ಗಮನದಲ್ಲಿ ಇಟು ್ಟಕೊಂಡು ಪ್ರವಾಸೋದ್ಯಮ ಬೆಳೆಸಬೇಕಾಗಿದೆ ಎಂದರು.

ಪ್ರವಾಸೋದ್ಯಮದಲ್ಲಿ ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಬೇಕು. ಸೋಲಾರ್ ಎನರ್ಜಿಯನ್ನು ಹೆಚ್ಚು ಬಳಸಿಕೊಳ್ಳಬೇಕು. ಈ ಮೂಲಕ ಜಿಲ್ಲೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಪ್ರವಾಸೋದ್ಯಮ ಬೆಳೆಯ ಬೇಕಾದರೆ ಸ್ವಚ್ಛತೆ ಅತೀ ಅಗತ್ಯವಾಗಿರುವತ್ತದೆ. ಒಮ್ಮೆ ಬಂದ ಪ್ರವಾಸಿಗರು ಮತ್ತೆಮತ್ತೆ ಈ ಜಿಲ್ಲೆಗೆ ಬರುವಂತಹ ವಾತಾವರಣವನ್ನು ನಾವು ನಿರ್ಮಿಸ ಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿಯಿಂದ ಉದ್ಯೋಗವಾಕಾಶಗಳು ಸೃಷ್ಠಿಯಾಗುವುದಲ್ಲದೆ ಪ್ರವಾಸಿಗರಿಗೆ ನೆಮ್ಮದಿ ಬದುಕು ಸಿಗಲು ಸಾಧ್ಯವಾಗುತ್ತದೆ. ಪ್ರವಾಸೋದ್ಯಮಕ್ಕೆ ಪೂರಕವಾಗಿ ಹೋಮ್ ಸ್ಟೇ ಸ್ಥಾಪಿಸುವ ಮೂಲಕ ಇಲ್ಲಿನ ಜನರಿಗೆ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ನಾವು ಪ್ರಕೃತಿಯನ್ನು ನೋಡುವ ದೃಷ್ಠಿಯನ್ನು ಬದಲಾಯಿಸುವ ಮೂಲಕ ಇಲ್ಲಿನ ದೃಶ್ಯವನ್ನೇ ಬದಲಾಯಿಸಬೇಕು ಎಂದರು.

ಉಡುಪಿ ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್., ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ., ಕರಾವಳಿ ಪ್ರವಾಸೋದ್ಯಮ ಸಂಘಟನೆ ಉಡುಪಿ ಜಿಲ್ಲಾಧ್ಯಕ್ಷ ಮನೋಹರ್ ಶೆಟ್ಟಿ, ನಗರಸಭೆ ಪೌರಾಯುಕ್ತ ರಾಯಪ್ಪ ಉಪಸ್ಥಿತರಿದ್ದರು.

ಮಣಿಪಾಲ ವ್ಯಾಕ್ಷ ಗ್ರೂಪ್‌ನ ಪ್ರಾಂಶುಪಾಲ ಡಾ.ಶೆಫ್ ಕೆ.ತಿರು ‘ಪ್ರವಾಸೋದ್ಯಮ ಮತ್ತು ಹಸಿರು ಹೂಡಿಕೆಗಳು’ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ವಿವಿಧ 80 ಪ್ರವಾಸಿ ತಾಣಗಳ ಕುರಿತ ಪುಸ್ತಕದ ಮುಖಪುಟವನ್ನು ಬಿಡುಗಡೆಗೊಳಿಸಲಾಯಿತು. ಪ್ರವಾಸೋದ್ಯಮ ಕುರಿತ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಸಿ.ಯು. ಸ್ವಾಗತಿಸಿದರು. ಬಳಿಕ ಕಲಾಮಯಂ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

ವಾಡಿಕೆಗಿಂತ ಶೇ.70ರಷ್ಟು ಕಡಿಮೆ ಮಳೆ!

ಉಡುಪಿ ಜಿಲ್ಲೆಯ ವಾಡಿಕೆ ಮಳೆಗಿಂತ ಈ ಬಾರಿ ಶೇ.70ರಷ್ಟು ಮಳೆ ಕಡಿಮೆ ಆಗಿದೆ. ಕಳೆದ ವರ್ಷ ಫೆಬ್ರವರಿ, ಮಾರ್ಚ್‌ ನಲ್ಲಿ ನೀರಿನ ಸಮಸ್ಯೆ ಎದುರಾದರೆ ಈ ಬಾರಿ ಡಿಸೆಂಬರ್‌ನಲ್ಲಿಯೇ ನೀರಿನ ಅಭಾವ ಉಂಟಾಗಬಹುದು. ಆದುದರಿಂದ ಇದನ್ನು ಗಮನದಲ್ಲಿರಿಸಿಕೊಂಡು ಈಗಲೇ ನೀರನ್ನು ಮಿತವ್ಯಯ ವಾಗಿ ಬಳಸಬೇಕು ಎಂದು ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ತಿಳಿಸಿದರು.

ಉಡುಪಿ ನಗರಕ್ಕೆ ಪ್ರತಿದಿನ 19 ಎಂಎಲ್‌ಡಿ ನೀರು ಸಾಕಾಗುತ್ತದೆ. ಆದರೆ ನಾವು 36 ಎಂಎಲ್‌ಡಿ ಅಂದರೆ ಎರಡು ಪಟ್ಟು ನೀರನ್ನು ಬಳಸುತ್ತಿದ್ದೇವೆ. ನೀರನ್ನು ವಾಹನ ತೊಳೆಯಲು, ಗಾರ್ಡನ್ ಸೇರಿದಂತೆ ಹಲವು ಕಾರ್ಯ ಗಳಿಗೆ ಅನಗತ್ಯವಾಗಿ ಪೋಲು ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News