ತೆಂಗು ಕಟ್ಟೆ ಕಟ್ಟುವಿಕೆ ನಷ್ಟಕಾರಿ: ರಾಮಕೃಷ್ಣ ಶರ್ಮ ಬಂಟಕಲ್ಲು
ಉಡುಪಿ, ಅ.27: ಗೊಬ್ಬರವನ್ನು ಮೂರು ತಿಂಗಳ ಕಾಲ ಬಿಸಿಲು ಮತ್ತು ಮಳೆ ನೀರಿನಿಂದ ರಕ್ಷಿಸಿ ಬಳಸಬೇಕು. ಯೂರಿಯಾ ಬಳಕೆ ಎಲ್ಲ ರೀತಿಯ ಬೆಳೆಗಳಿಗೆ ಮತ್ತು ಮನುಷ್ಯರಿಗೆ ಹಾನಿಕರವಾಗಿದೆ. ಕಟ್ಟೆ ಕಟ್ಟುವ ಕ್ರಮ ತೆಂಗಿನ ಗಿಡ ಮತ್ತು ಮರಗಳಿಗೆ ಹಾನಿಯಾಗುವುದರೊಂದಿಗೆ ಕೃಷಿಕರಿಗೆ ನಷ್ಟಕಾರಿ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಹೇಳಿದ್ದಾರೆ.
ಕುರಲ್ ರೈತ ಉತ್ಪಾದಕರ ಕಂಪೆನಿ ಹಿರಿಯಡ್ಕ, ಉಡುಪಿ ಜಿಲ್ಲಾ ಕೃಷಿಕ ಸಂಘ, ಪರಿಸರ ಮತ್ತು ಸಾಮಾಜಿಕ ಅಭಿವೃದ್ಧಿ ಆಯೋಗ ಕೆಮ್ಮಣ್ಣು ಇವುಗಳ ಸಹಯೋಗದಲ್ಲಿ ಕೆಮ್ಮಣ್ಣು ಸಂತ ತೆರೇಸಾ ಚರ್ಚ್ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸ ಲಾದ ಕೃಷಿ ಮಾಹಿತಿ ಕಾರ್ಯಾಗಾರದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಅಧ್ಯಕ್ಷತೆಯನ್ನು ಧರ್ಮಗುರು ಫಾ.ಫಿಲಿಪ್ ನೇರಿ ಆರಾನ್ಹಾ ವಹಿಸಿದ್ದರು. ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಮೋಹನರಾಜ್ ಕೃಷಿ ಇಲಾಖೆಯಿಂದ ಕೃಷಿಕರಿಗೆ ಸಿಗುವ ಸರಕಾರಿ ಸೌಲಭ್ಯಗಳು ಮತ್ತು ಕೃಷಿ ಉದ್ಯಮಕ್ಕೆ ಸಿಗುವ ಪ್ರೋತ್ಸಾಹ ಕುರಿತು ಮಾಹಿತಿ ನೀಡಿದರು.
ಅರುಣ್ ಫೆರ್ನಾಂಡಿಸ್, ರೀಟಾ ಡಿಸೋಜ, ಜ್ಯೋತಿ ಬರೆಟ್ಟೋ, ರವೀಂದ್ರ ಗುಜ್ಜರಬೆಟ್ಟು ಮೊದಲಾದರವರು ಉಪಸ್ಥಿತರಿ ದ್ದರು. ಕುರಲ್ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ರೊನಾಲ್ಡ್ ಸಲ್ದಾನ ಸ್ವಾಗತಿಸಿದರು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನವೀನ್ ಭಟ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.