ಮಣಿಪಾಲ ಪೊಲೀಸರ ನೋಟೀಸಿಗೆ ನ್ಯಾಯಾಲಯ ತಡೆಯಾಜ್ಞೆ
ಉಡುಪಿ, ಆ.27: ರಾತ್ರಿ 10ಗಂಟೆಯ ಬಳಿಕ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಸನ್ನದುಗಳನ್ನು ಮುಚ್ಚಲು ಹಾಗೂ ಬಾರ್ ಮತ್ತು ರೆಸ್ಟೋರೆಂಟ್‌ಗಳ ಒಳಗೆ ಡಿಜೆ, ಲೌಡ್‌ಸ್ಪೀಕರ್‌ಗಳು, ಸೌಂಡ್ ಬಾಕ್ಸ್, ನೃತ್ಯಗಳಿಗೆ ಅವ ಕಾಶ ನಿರಾಕರಿಸಿ ನೀಡಿರುವ ನೋಟೀಸಿಗೆ ರಾಜ್ಯ ಉಚ್ಛ ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದು ಉಡುಪಿ ಜಿಲ್ಲಾ ವೈನ್ ಮರ್ಚಂಟ್ಸ್ ಅಸೋಸಿಯೇಸನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸಂಬಂಧ ಮಣಿಪಾಲ ಪೊಲೀಸ್ ವೃತ್ತ ನಿರೀಕ್ಷಕರ ಆ.6ರ ನೋಟೀಸ್‌ನ್ನು ಹಿಂಪಡೆಯುವಂತೆ, ಪುನರ್ ಪರಿಶೀಲಿಸು ವಂತೆ ಮಾಡಿಕೊಂಡ ಮನವಿಯ ಹೊರತಾಗಿಯೂ ಸಮಸ್ಯೆ ಬಗೆಹರಿಯದೇ ಇದ್ದಾಗ ಸಂಘದ ಸದಸ್ಯರಾದ ಸನ್ನದುದಾ ರರು ಹೈಕೋರ್ಟ್‌ನಲ್ಲಿ ರಿಟ್ ಪಿಟಿಷನ್ ದಾಖಲಿಸಿದ್ದು, ಉಚ್ಛ ನ್ಯಾಯಾಲಯದ ನ್ಯಾಯಾಧೀಶರು ಆ.22ರಂದು ತಡೆಯಾಜ್ಞೆ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಇದರಂತೆ ಸನ್ನದು ಶರ್ತದಲ್ಲಿ ನಮೂದಿಸಿದ ಅವಧಿ ಪ್ರಕಾರ ಸನ್ನದು ನಡೆಸಲು ಅವಕಾಶ ನೀಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸನ್ನದುದಾರರ ಪರವಾಗಿ ಹಿರಿಯ ನ್ಯಾಯವಾದಿ ಎಸ್.ಮಹೇಶ್ ಕಿರಣ್ ಶೆಟ್ಟಿ ವಾದಿಸಿದ್ದರು ಎಂದು ಅದು ಹೇಳಿದೆ.