ಮನೆಗೆ ನುಗ್ಗಿ ಚಿನ್ನಾಭರಣ ಕಳವು: ಪ್ರಕರಣ ದಾಖಲು

Update: 2024-08-27 15:57 GMT

ಉಡುಪಿ : ಪುತ್ತೂರು ಗ್ರಾಮದ ಮನೆಯೊಂದಕ್ಕೆ ನುಗ್ಗಿದ ಕಳಞ್ಳರು ಚಿನ್ನಾಭರಣ ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ಟೈಲರಿಂಗ್ ಕೆಲಸವನ್ನು ಮಾಡಿಕೊಂಡಿದ್ದ ಅಂಬಿಕಾ ಎಂಬವರು ಆ.೨೩ರಂದು ಕೆಲಸ ಮುಗಿಸಿ ಸಂಜೆ ಮನೆಗೆ ಹೋಗಿ ನೋಡಿದಾಗ ಕಾಪಾಟಿನಲ್ಲಿದ್ದ ಮಗಳ 1 ಪವನ್ ತೂಕದ ಚಿನ್ನದ ಚೈನ್ ಹಾಗೂ 1 ಪವನ್ ತೂಕದ ಒಂದು ಜೊತೆ ಚಿನ್ನದ ಕಿವಿ ಓಲೆ ಕಳವಾಗಿರುವುದು ಕಂಡುಬಂದಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News