'ಮೀಫ್'ನಿಂದ ಅಂತರ್ ಶಾಲಾ ಕಬಡ್ಡಿ ಪಂದ್ಯಾಟ

Update: 2023-11-08 08:18 GMT

ಉಡುಪಿ, ನ.8: ಸುಮಾರು 4000 ವರ್ಷಗಳ ಇತಿಹಾಸವಿರುವ ಕಬಡ್ಡಿ ದೇಸಿ ಆಟವಾಗಿದ್ದು, ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತಲೇ ಮಾನಸಿಕ ಸತ್ವವನ್ನು ವೃದ್ಧಿಸಲು ಸಹಕಾರಿ ಎಂದು ಕಾಪು ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಅಬ್ದುಲ್ ಖಾದರ್ ಹೇಳಿದ್ದಾರೆ.

ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್) ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ವತಿಯಿಂದ ಕಾಪು ಚಂದ್ರ ನಗರದ ಕ್ರೆಸೆಂಟ್ ಇಂಟರ್ ನ್ಯಾಶನಲ್ ಸ್ಕೂಲ್ ನಲ್ಲಿ ಮಂಗಳವಾರ ಆಯೋಜಿಸಿದ್ದ ಅಂತರ್ ಶಾಲಾ ಕಬಡ್ಡಿ ಕ್ರೀಡಾಕೂಟವನ್ನು ಉುದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಲ್ಲಾರು ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ರಿತೇಶ್ ಕುಮಾರ್ ಶೆಟ್ಟಿ ಸೂಡಾ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳೆರಡರಲ್ಲೂ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಇನ್ನೋರ್ವ ಮುಖ್ಯ ಅತಿಥಿ ಕಾಪು ಕ್ರೆಸೆಂಟ್ ಇಂಟರ್ ನ್ಯಾಶನಲ್ ಸ್ಕೂಲ್ ನ ಟ್ರಸ್ಟಿ ಆಸಿಫ್ ಮಾತನಾಡಿ ಶುಭ ಹಾರೈಸಿದರು.

ಇದೇವೇಳೆ ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೀಫ್ ಸಂಘಟನೆಯ ಮುಖ್ಯಸ್ಥ ಮೂಸಬ್ಬ ಪಿ. ಬ್ಯಾರಿಯವರನ್ನು ಸನ್ಮಾನಿಸಲಾಯಿತು. ಅತಿಥಿಗಳಾದ ಅಬ್ದುಲ್ ಖಾದರ್ ಮತ್ತು ರಿತೇಶ್ ಕುಮಾರ್ ಶೆಟ್ಟಿ ಸೂಡಾರನ್ನು ಸಹ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಬಿ.ಎ.ಇಕ್ಬಾಲ್, ಬಂಟ್ವಾಳ ಬುರೂಜ್ ಪ್ರೌಢಶಾಲೆಯ ಅಧ್ಯಕ್ಷ ಶೇಕ್ ರಹ್ಮತುಲ್ಲಾ, ಮೀಫ್ ಮಾಧ್ಯಮ ಕಾರ್ಯದರ್ಶಿ ಪಿ.ಎ.ಇಲ್ಯಾಸ್, ಕಾರ್ಯಕಾರಿ ಸದಸ್ಯ ಪರ್ವೇಝ್ ಅಲಿ, ಮುಹಮ್ಮದ್ ಸಿರಾಜ್ ಮನೆಗಾರ ಜೋಕಟ್ಟೆ, ಮೀಫ್ ಉಪಾಧ್ಯಕ್ಷರಾ ಮುಸ್ತಫ ಸುಳ್ಯ, ಸಾಬಿ ಖಾಝಿ, ಪ್ರಧಾನ ಕಾರ್ಯದರ್ಶಿ ರಿಯಾಝ್ ಕಣ್ಣೂರ್, ಕಾರ್ಯಕ್ರಮ ಕಾರ್ಯದರ್ಶಿ ಶಾರಿಕ್, ಕಾರ್ಯದರ್ಶಿಗಳಾದ ಅನ್ವರ್ ಇಲ್ಯಾಝ್ ಕಾಟಿಪಳ್ಳ ಮತ್ತು ಉಮರ್ ಮುಲ್ಕಿ, ಇಕ್ಬಾಲ್ ಕೃಷ್ಣಾಪುರ ಮತ್ತು ಕ್ರೆಸೆಂಟ್ ಶಾಲೆಯ ಆಡಳಿತಾಧಿಕಾರಿ ಶಹನಾಝ್ ಬೇಗಂ, ಶಾಲಾ ಸಂಸ್ಥಾಪಕ ಶಂಸುದ್ದೀನ್ ಯೂಸುಫ್ ಸಾಹೇಬ್, ಶಾಲಾಡಳಿತ ಅಧಿಕಾರಿ ನವಾಬ್ ಹಸನ್ ಗುತ್ತೇದಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಅಬ್ದುಲ್ ಅಹದ್ ಸ್ವಾಗತಿಸಿದರು. ಸಿಮ್ರಾ ಶೇಕ್ ವಂದಿಸಿದರು. ಶಿಕ್ಷಕಿ ಅಸಿಮ್ ಕಾರ್ಯಕ್ರಮ ನಿರೂಪಿಸಿದರು.

ಪಂದ್ಯಾಟದಲ್ಲಿ ಬಂಟ್ವಾಳದ ತೌಹೀದ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಪ್ರಥಮ ಹಾಗೂ ಅಂಜುಮಾನ್ ಆಂಗ್ಲ ಮಾಧ್ಯಮ ಶಾಲೆಯು ದ್ವಿತೀಯ ಬಹುಮಾನವನ್ನು ಮುಡಿಗೇರಿಸಿಕೊಂಡವು.

ಫಲಿತಾಂಶದ ವಿವರ

ಪ್ರಥಮ: ತೌಹೀದ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಬಂಟ್ವಾಳ

ದ್ವಿತೀಯ: ಅಂಜುಮನ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಜೋಕಟ್ಟೆ

ಬೆಸ್ಟ್ ಡಿಫೆಂಡರ್: ಮುಹಮ್ಮದ್ ಫರ್ಹಾನ್ ತೌಹೀದ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಬಂಟ್ವಾಳ ದ. ಕ

ಬೆಸ್ಟ್ ಆಲ್ ರೌಂಡರ್: ಮುಹಮ್ಮದ್ ಫಾಝಿಲ್ ತೌಹೀದ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಬಂಟ್ವಾಳ ದ. ಕ

ಬೆಸ್ಟ್ ರೈಡರ್: ಝಕರಿಯಶಹೀಮ್ ಅಂಜುಮನ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಜೋಕಟ್ಟೆ ದ.ಕ.

ಪಂದ್ಯಾಟದಲ್ಲಿ ಒಟ್ಟು 18 ತಂಡಗಳ 280 ವಿದ್ಯಾರ್ಥಿಗಳು ಭಾಗವಹಿಸಿದ್ದರು.

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News