ಕೋಡಿ: ಮರಳಿನಲ್ಲಿ ಅರಳಿದ ಗಣೇಶನ ಶಿಲ್ಪ ಕಲಾಕೃತಿ
Update: 2023-09-16 21:44 IST

ಕುಂದಾಪುರ, ಸೆ.16: ತ್ರಿವರ್ಣ ಕಲಾ ಕೇಂದ್ರದ ಕಿರಿಯರ ವಿಭಾಗದ ಆಯ್ದ ವಿದ್ಯಾರ್ಥಿಯರು ಗಣೇಶ ಹಬ್ಬದ ಪ್ರಯುಕ್ತ ಕೋಡಿ ಕಿನಾರ ಕಡಲ ತೀರದಲ್ಲಿ ಇಂದು ಗಣೇಶನ ಮರಳು ಶಿಲ್ಪ ಕಲಾಕೃತಿಯನ್ನು ರಚಿಸಿದರು.
ವರ್ಣ ವಿನಾಯಕ ಎಂಬ ಶೀರ್ಷಿಕೆಯಡಿಯಲ್ಲಿ ಮೋದಕ ಪ್ರಿಯ ಸೊಂಡಿಲ ಬಾಲ ಗಣಪ ಪ್ರಕೃತಿ ಮಡಿಲಲ್ಲಿ ಶಿವಲಿಂಗ ದೊಂದಿಗೆ ಬಣ್ಣದ ಮೂಲಕ ಕಂಗೊಳಿಸುವ 4 ಅಡಿ ಎತ್ತರ ಮತ್ತು 9 ಅಡಿ ಅಗಲದ ಕಲಾಕೃತಿಯನ್ನು ರಚಿಸ ಲಾಯಿತು. ಕಲಾವಿದ ಮತ್ತು ತ್ರಿವರ್ಣ ಕಲಾಕೇಂದ್ರದ ಹರೀಶ್ ಸಾಗಾ ಮಾರ್ಗದರ್ಶನದಲ್ಲಿ 15 ವಿದ್ಯಾರ್ಥಿಯರು ಇದರಲ್ಲಿ ತೊಡಗಿಸಿ ಕೊಂಡಿದ್ದರು. ಶಿಕ್ಷಕಿ ಚೇತನಾ ಜಿ.ಸಂತೋಷ್ ಹಾಲಾಡಿ ಸಹಕರಿಸಿದರು.