ಹೊಸ ನಿಯಮಾವಳಿ ವಿರೋಧಿಸಿ ಲಾರಿ ಮಾಲಕ, ಚಾಲಕರಿಂದ ಕಾಲ್ನಡಿಗೆ ಜಾಥ

Update: 2023-09-26 15:59 GMT

ಕೋಟ, ಸೆ.26: ಜಿಲ್ಲೆಯಲ್ಲಿ ಇತ್ತೀಚೆಗೆ ಹೊಸ ನಿಯಮಾವಳಿಯಿಂದ ಲಾರಿ ಚಾಲಕರು, ಮಾಲಕರು ಸಮಸ್ಯೆ ಅನುಭವಿಸು ತ್ತಿದ್ದಾರೆ ಎಂದು ಆರೋಪಿಸಿ ಕೋಟ ವಲಯದ ಲಾರಿ ಚಾಲಕರ ಮತ್ತು ಮಾಲಕರ ಸಂಘದವರು ಮಂಗಳವಾರ ಕೋಟ ಮೂರುಕೈನಿಂದ ಪೊಲೀಸ್ ಠಾಣೆವರೆಗೆ ಕಾಲ್ನಡಿಗೆ ಜಾಥಾ ನಡೆಸಿ ಪೊಲೀಸರಿಗೆ ಮನವಿ ಸಲ್ಲಿಸಿದರು.

ಲಾರಿ ಚಾಲಕರ ಮತ್ತು ಮಾಲಕರ ಸಂಘದ ಅಧ್ಯಕ್ಷ ಭೋಜ ಪೂಜಾರಿ ಮಾತನಾಡಿ, ಹೊಸ ನಿಯಮಾವಳಿ ಪ್ರಕಾರ ಲಾರಿ ಚಾಲಕರ ಮತ್ತು ಮಾಲಕರಿಗೆ ಸಮಸ್ಯೆವಾಗುತ್ತಿದ್ದು ಈ ಬಗ್ಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕೂಲಂಕುಶವಾಗಿ ಪರಿಶೀಲಿಸಬೇಕು. ಯಾವುದೇ ಸಮಸ್ಯೆಗಳಿಲ್ಲದೆ ವ್ಯವಹರಿಸಿಕೊಂಡು ಬರುತ್ತಿರುವ ಲಾರಿ ಮಾಲಕ ಹಾಗೂ ಚಾಲಕರಿಗೆ ಈ ಆದೇಶ ಸಂಕಷ್ಟವನ್ನು ತಂದಿರಿಸಿದೆ ಎಂದು ದೂರಿದರು.

ಅಲ್ಲದೆ ಇದರಿಂದ ಕೂಲಿಕಾರ್ಮಿಕರ ಹೊಟ್ಟೆಯ ಮೇಲೆ ಬರೆ ಎಳೆದಂತಾಗಿದೆ ಕೆಲಸ ಕಾರ್ಯಗಳಿಲ್ಲದೆ ಕಾರ್ಮಿಕರು ಅತಂತ್ರರಾಗಿದ್ದಾರೆ. ವಾಹನ ಚಲಾವಣೆ ಮಾಡುವಲ್ಲಿ ತಂದ ಬದಲಾವಣೆಗಳು ಹಿಂದಿರುವಂತೆ ಜಾರಿಗೊಳಿಸಿ ಆದೇಶ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಸ್ತೆಯ ಬದಿಯಲ್ಲಿ ತಮ್ಮ ಟಿಪ್ಪರ್, ಇತರೆ ವಾಹನಗಳನ್ನು ನಿಲ್ಲಿಸಿ ಪ್ರತಿಭಟನೆಯನ್ನು ಮಾಡಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ಬ್ರಹ್ಮಾವರ ವೃತ್ತ ನಿರೀಕ್ಷಕ ಪಿಎಂ ದಿವಾಕರ್ ಮನವಿ ಸ್ವೀಕರಿಸಿದರು. ಈ ಸಂದರ್ಭ ಸಂಘದ ಪ್ರಮುಖರಾದ ಸುಧೀರ್ ಮಲ್ಯಾಡಿ, ಮಹಾಬಲ ಪೂಜಾರಿ, ವಿನೋದ್ ದೇವಾಡಿಗ, ಕೀರ್ತಿಶ್ ಕೋಟ, ರಹಮತ್, ಜಮಾಲ್ ಮಧುವನ, ಗಣೇಶ್, ವಿಜಯ್ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News