ಹೂಡೆ ಸಾಲಿಹಾತ್ ಶಿಕ್ಷಣ ಸಂಸ್ಥೆಯಲ್ಲಿ ಪ್ರತಿಭಾ ಪುರಸ್ಕಾರ
ಉಡುಪಿ, ಆ.28: ಹೂಡೆಯ ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಬೋರ್ಡ್ ಆಫ್ ಇಸ್ಲಾಮಿಕ್ ಪಬ್ಲಿಕ್ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿಧ್ಯಾರ್ಥಿಗಳನ್ನು ಗೌರವಿಸುವ ಕಾರ್ಯಕ್ರಮ ಇತ್ತಿಚೆಗೆ ಜರಗಿತು.
ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ರಾಯಚೂರು ಎ.ಜೆ. ಅಕಾಡೆಮಿಯ ನಿರ್ದೇಶಕ ಅಬ್ದುಲ್ಲಾ ಜಾವೀದ್ ವಿದ್ಯಾರ್ಥಿ ಗಳನ್ನುದ್ದೇಶಿಸಿ ಮಾತನಾಡಿ, ಪ್ರಸಕ್ತ ಜೀವನ ವ್ಯವಸ್ಥೆಯಲ್ಲಿ ಮಾನವೀಯ ಮೌಲ್ಯಗಳು ದೂರವಾಗುತ್ತಿರುವ ಸಂದರ್ಭಗಳಲ್ಲಿ ನೈತಿಕತೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಬೋರ್ಡ್ ಆ್ ಇಸ್ಲಾಮಿಕ್ ಅಧ್ಯಯನ ಪೂರಕವಾಗಿವೆ ಎಂದು ಹೇಳಿದರು.
ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಯ ಹಿರಿಯ ಟ್ರಸ್ಟಿ ಮೌಲಾನ ಆದಂ ಸಾಹೇಬ್ ರ್ಯಾಂಕ್ ವಿಜೇತರನ್ನು ಸನ್ಮಾನಿಸಿ ದರು. ಈ ಸಂದರ್ಭ ಎ.ಜೆ. ಅಕಾಡೆಮಿಯ ವತಿಯಿಂದ ನಡೆದ ಮೂರು ದಿನಗಳ ಕುರಾನಿಕ್ ತರಗತಿಯಲ್ಲಿ ಸಕ್ರೀಯವಾಗಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸ ಲಾಯಿತು.
ಶಿಕ್ಷಣ ಸಂಸ್ಥೆಯ ಉಪಾಧ್ಯಾಕ್ಷ ಇದ್ರೀಸ್ ಹೂಡೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಸ್ಲಾಂ ಹೈಕಾಡಿ, ಜಮೀಲಾ ಸದೀದ, ಅರೆಬಿಕ್ ಕಾಲೇಜಿನ ಪ್ರಾಂಶುಪಾಲೆ ಕುಲ್ಸುಮ್ ಅಬೂಬಕರ್, ಮೌಲಾನ ಶಾಹಿದ್ ನದ್ವಿ ಮುಂತಾದವರು ಉಪಸ್ಥಿರಿದ್ದರು. ಕುಲ್ಸುಮ್ ಅಬೂಬಕರ್ ಸ್ವಾಗತಿಸಿದರು. ಶಿಕ್ಷಕಿ ಸುರಯ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.