ಕಾರವಾರ-ಬೆಂಗಳೂರು ಮಾರ್ಗದ ರೈಲು ಸಂಚಾರ ವ್ಯತ್ಯಯ
ಉಡುಪಿ, ಆ.16: ಮೈಸೂರು ವಿಭಾಗದ ನೈರುತ್ಯ ರೈಲ್ವೆಗೆ ಸೇರಿದ ಮಂಗಳೂರು-ಬೆಂಗಳೂರು ರೈಲು ಮಾರ್ಗದಲ್ಲಿ ಸಕಲೇಶಪುರ ಬಾಳ್ಳುಪೇಟೆ ಬಳಿ ಸಂಭವಿಸಿದ ಗುಡ್ಡ ಕುಸಿತದ ದುರಸ್ತಿ ಕಾಮಗಾರಿ ಇನ್ನೂ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೊಂಕಣ ರೈಲು ಮಾರ್ಗದಲ್ಲಿ ಕಾರವಾರ ಹಾಗೂ ಬೆಂಗಳೂರು ನಡುವಿನ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಇನ್ನೂ ಮುಂದುವರಿದಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ರದ್ದಾದ ರೈಲುಗಳ ವಿವರ:
*ರೈಲು ನಂ.16585 ಸರ್ ಎಂ.ವಿಶ್ವೇಶ್ವರಯ್ಯ ಬೆಂಗಳೂರು- ಮುರ್ಡೇಶ್ವರ ಎಕ್ಸ್‌ಪ್ರೆಸ್ ರೈಲಿನ ಆ.16ರ ಸಂಚಾರ ಸಂಪೂರ್ಣ ರದ್ದು.
*ರೈಲು ನಂ.16586 ಮುರ್ಡೇಶ್ವರ- ಸರ್ ಎಂ.ವಿಶ್ವೇಶ್ವರಯ್ಯ ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನ ಆ.16ರ ಸಂಚಾರ ಸಂಪೂರ್ಣ ರದ್ದು.
*ರೈಲು ನಂ.16515 ಕೆಎಸ್‌ಆರ್ ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್ ರೈಲಿನ ಆ.16ರ ಸಂಚಾರವನ್ನು ಹಾಸನದಲ್ಲಿ ಕೊನೆಗೊಳಿಸಿದ್ದು, ಹಾಸನ ಹಾಗೂ ಕಾರವಾರ ನಡುವಿನ ಸಂಚಾರ ಭಾಗಶ: ರದ್ದು.
*ರೈಲು ನಂ.16516 ಕಾರವಾರ- ಕೆಎಸ್‌ಆರ್ ಯಶವಂತಪುರ ಎಕ್ಸ್‌ಪ್ರೆಸ್ ರೈಲಿನ ಆ.16ರ ಸಂಚಾರವನ್ನು ಸಂಪೂರ್ಣವಾಗಿ ರದ್ದು ಪಡಿಸಲಾಗಿದೆ.
ಮಾರ್ಗ ಬದಲು
*ರೈಲು ನಂ.16595 ಕೆಎಸ್‌ಆರ್ ಬೆಂಗಳೂರು- ಕಾರವಾರ ಎಕ್ಸ್‌ಪ್ರೆಸ್ ರೈಲಿನ ಆ.16ರ ಸಂಚಾರವನ್ನು ನಿಗದಿತ ನೆಲಮಂಗಲ- ಹಾಸನ- ಸಕಲೇಶಪುರ- ಸುಬ್ರಹ್ಮಣ್ಯ ರೋಡ್- ಪಡೀಲ್ ಬದಲು ಅರಸಿಕೆರೆ ಜಂಕ್ಷನ್- ಹುಬ್ಬಳ್ಳಿ ಜಂಕ್ಷನ್- ಲೊಂಡಾ ಜಂಕ್ಷನ್- ಮಡಗಾಂವ್ ಜಂಕ್ಷನ್‌ಗೆ ಬದಲಾಯಿಸಿ ಓಡಿಸಲಾಗುತ್ತಿದೆ.
*ರೈಲು ನಂ.16596 ಕಾರವಾರ- ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನ ಆ.16ರ ಸಂಚಾರವನ್ನು ನಿಗದಿತ ಮಾರ್ಗದ ಬದಲು ಮಡಗಾಂವ್ ಜಂಕ್ಷನ್- ಲೊಂಡಾ ಜಂಕ್ಷನ್- ಹುಬ್ಬಳ್ಳಿ ಜಂಕ್ಷನ್- ಅರಸಿಕೆರೆ ಜಂಕ್ಷನ್ ಮಾರ್ಗದಲ್ಲಿ ಓಡಿಸಲಾಗುತ್ತಿದೆ.
*ರೈಲು ನಂ.07378 ಮಂಗಳೂರು ಸೆಂಟ್ರಲ್- ವಿಜಯಪುರ ವಿಶೇಷ ರೈಲಿನ ಆ.16ರ ಸಂಚಾರದ ಮಾರ್ಗವನ್ನು ನಿಗದಿತ ಮಂಗಳೂರು ಸೆಂಟ್ರಲ್- ಸುಬ್ರಹ್ಮಣ್ಯ ರೋಡ್- ಹಾಸನ- ಅರಸಿಕೆರೆ ಜಂಕ್ಷನ್- ಹುಬ್ಬಳ್ಳಿ ಜಂಕ್ಷನ್ ಬದಲು ಮಂಗಳೂರು ಜಂಕ್ಷನ್- ಕಾರವಾರ- ಮಡಗಾಂವ್ ಜಂಕ್ಷನ್- ಲೊಂಡಾ ಜಂಕ್ಷನ್- ಹುಬ್ಬಳ್ಳಿ ಜಂಕ್ಷನ್ ಮಾರ್ಗದಲ್ಲಿ ಓಡಿಸಲಾಗುತ್ತಿದೆ ಎಂದು ಕೊಂಕಣ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಯವರ ಪ್ರಕಟಣೆ ತಿಳಿಸಿದೆ.