ಕಾರವಾರ: ಬಲೆಗೆ ಬಿದ್ದ ಬೃಹತ್ ಗಾತ್ರದ ಬಂಗುಡೆ ಮೀನು

Update: 2023-08-27 17:31 GMT

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಈವರೆಗೆ ಲಭ್ಯವಾಗದಂತಹ ಬೃಹತ್ ಗಾತ್ರದ ಬಂಗುಡೆ ಮೀನು ಕಾರವಾರದ ಅರಬ್ಬಿ ಸಮುದ್ರದಲ್ಲಿ ಬೈತಖೋಲ್ ಮೀನುಗಾರರ ಬಲೆಗೆ ಬಿದ್ದಿದೆ.

ಈ ಮೀನು ಬೀಡು ಬಲೆ ಮೀನುಗಾರಿಕೆಗೆ ತೆರಳಿದ್ದ ಆನಂದ ಹರಿಕಂತ್ರ ಅವರ ಬಲೆಗೆ ಸಿಕ್ಕಿದೆ. ನವೀನ ಹರಿಕಂತ್ರ ಮೀನು ಖರೀದಿಸಿದ್ದು, ವಿಶೇಷವಾಗಿ ಕಂಡಿರುವ ಬಂಗುಡೆಯನ್ನು ಮೀನುಗಾರರ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ವಿನಾಯಕ ಹರಿಕಂತ್ರ ಅವರಿಗೆ ನೀಡಿದ್ದಾರೆ.

ಈ ಮೀನು ಸುಮಾರು 19 ಇಂಚು ಉದ್ದ ಮತ್ತು 4.5 ಇಂಚು ಅಗಲ ಇದೆ. ಇಷ್ಟು ದೊಡ್ಡ ಬಂಗುಡೆ ಕರಾವಳಿಯಲ್ಲಿ ಪತ್ತೆಯಾಗಿರುವ ಮಾಹಿತಿ ಇಲ್ಲ ಎಂದು ಕರ್ನಾಟಕ ವಿಶ್ವ ವಿದ್ಯಾನಿಲಯದ ಕಡಲವ ವಿಜ್ಞಾನ ವಿಭಾಗ ತಿಳಿಸಿದೆ.

ದೊಡ್ಡ ಗಾತ್ರದ ಬಂಗುಡೆಯನ್ನು ಸಾರ್ವಜನಿಕರ ವೀಕ್ಷಣೆಗಾಗಿ ಕಾರವಾರ ಕಡಲವಿಜ್ಞಾನ ಕೇಂದ್ರದಲ್ಲಿ ಪ್ರದರ್ಶನಕ್ಕೆ ಇಡಲಾಗುವುದು ಎಂದು ವಿನಾಯಕ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News